ಕಾಸರಗೋಡು: ತನ್ನ 7ನೇಯ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನೀಡಿ ವಿದ್ವಾಂಸರುಗಳಿಂದ ಪ್ರಶಂಶಿಸಲ್ಪಟ್ಟ ಯುವ ಗಾಯಕ ಅಭಿಲಾಷ್ ಗಿರಿಪ್ರಸಾದ್ ಚೆನ್ನೈ ಅವರಿಂದ ಜ.12 ರಂದು ಕಾಸರಗೋಡಿನ ಲಲಿತ ಕಲಾಸದನದಲ್ಲಿ ಸಂಗೀತ ಕಚೇರಿ ನಡೆಯಲಿದೆ.
ತನ್ನ 4ನೇ ವಯಸ್ಸಿನಲ್ಲಿ ಪ್ರಸಿದ್ಧ ಸಂಗೀತಜ್ಞ, ಕಲಾಕ್ಷೇತ್ರ ಚೆನ್ನೈನ ಪ್ರಚಾರ್ಯರಾದ ವಿದ್ವಾನ್ ಎ.ಮುರಳಿ ಅವರಲ್ಲಿ ಶಿಷ್ಯತ್ವವನ್ನು ಪಡೆದು, ಅಭ್ಯಸಿಸಿ, ಸಂಗೀತ ಚೂಡಾಮಣಿ ಮುಷ್ಣಂ ವಿ.ರಾಜಾರಾವ್ ಅವರಲ್ಲಿ ವಿಶೇಷ ಆದ್ಯಯನ ನಡೆಸಿದ್ದಾರೆ. ದೇಶ ಮತ್ತು ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧರಾದ ಅವರು ಹಿಂದೂಸ್ಥಾನಿ ಸಂಗೀತದಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದು. ಪ್ರಸಿದ್ಧ ಗಾಯಕ ಭೀಮಸೇನ ಜೋಷಿಯವರ ಶಿಷ್ಯ ಪೆÇ್ರಫೆಸರ್ ರಾಮಮೂರ್ತಿ ಅವರಲ್ಲಿ ಸಂಗೀತಾಭ್ಯಾಸ ಮಾಡಿರುತ್ತಾರೆ. ಆಮೇರಿಕಾ, ಕೆನಡ, ದಕ್ಷಿಣ ಆಫ್ರಿಕಾ, ಸಿಂಗಾಪುರ, ಮಾರಿಷಸ್ ಮುಂತಾದ ದೇಶಗಳಲ್ಲಿ ಹಲವಾರು ಬಾರಿ ಆಹ್ವಾನಿತರಾಗಿ ಜನಮನ್ನಣಿಗಳಿಸಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತದಲ್ಲಿ ಆಕಾಶವಾಣಿಯಿಂದ ಶ್ರೇಣೀಕೃತ ಕಲಾವಿದರಾಗಿದ್ದಾರೆ. ಹಲವಾರು ಗೌರವ ಮತ್ತು ಪುರಸ್ಕಾರಗಳಿಂದ ಸಮ್ಮಾನಿತರಾಗಿದ್ದು. 2006ರಲ್ಲಿ ಕೃಷ್ಣಗಾನ ಸಭಾ ಚೆನ್ನೈಯಿಂದ `ರೋಹಿಣಿಕೃಷ್ಣ' ಪುರಸ್ಕಾರ, 2008 `ಯೂತ್ ಎಕ್ಸಲೆನ್ಸ್' ಪುರಸ್ಕಾರ, ಭಾವನ್ಸ್ ಕಲ್ಚರಲ್ ಅವಾರ್ಡ್, 2012ರಲ್ಲಿ `ಬಾಲ ಪುರಸ್ಕಾರ' ವಿ.ಡಿ.ಎಸ್.ಆಟ್ರ್ಸ್ ಆಕಾಡಮಿ ಚೆನ್ನೈ, 2013 ರಲ್ಲಿ `ಕಲೈ ಇಳಾಮಣಿ' ಸಂಸ್ಕøತಿ ಇಲಾಖೆ ಚೆನ್ನೈ, ಶ್ರೇಷ್ಠ ಯುವ ಕಲಾವಿದ ತ್ಯಾಗಬ್ರಹ್ಮ ಗಾನಸಭಾ ಚೆನ್ನೈ, 2013ರಲ್ಲಿ `ಯುವ ಕಲಾಭಾರತಿ' ಭಾರತ್ ಕಲಾಚಾರ ಚೆಚೆನ್ನೈ, 2014 ರಲ್ಲಿ `ಬಾಲಕಲಾರತ್ನ' ಬಾಲ ಕಲಾ ಸಂಗಮ ಮತ್ತು ಐಟಿಸಿ ಮತ್ತು ಸಂಗೀತ ಕಲಾಜ್ಯೋತಿ ಪುರಸ್ಕಾರವನ್ನು ವರ ಸಿದ್ಧಿವಿನಾಯಕ ಸಭಾ ಟೊರೆಂಟೋ ಕೆನಡದಿಂದ ಪಡೆದಿದ್ದಾರೆ. ಅಂತೆಯೇ ಎಂ.ಎಸ್. ಸುಬ್ಬಲಕ್ಷಿ, ಆರಿಯಾಕ್ಕುಡಿ ಮುಂತಾದ ಹತ್ತು ಹಲವು ಫೆಲೋಶಿಪ್ ಮತ್ತು ಸ್ಕಾಲರ್‍ಶಿಪ್‍ಗಳು ಇವರಿಗೆ ಲಭಿಸಿವೆ.
ಪ್ರಸ್ತುತ 24ರ ಹರೆಯದ ಈ ಪ್ರತಿಭಾವಂತ ಯುವ ಕಲಾವಿದರ ಸಂಗೀತ ಕಚೇರಿಯನ್ನು ಜ.12ರಂದು ಅಪರಾಹ್ನ 4 ಗಂಟೆಗೆ ನಗರದ ಲಲಿತ ಕಲಾ ಸದನದಲ್ಲಿ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ ಕಾಸರಗೋಡು ಇದರ 23ನೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಸಂಗೀತಾಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.