ಕಾಸರಗೋಡು: ನಗರದ ಅಡ್ಕತ್ತಬೈಲು ಜಿ.ಯು.ಪಿ.ಎಸ್. ಶಾಲೆಯ ಶತಮಾನೋತ್ಸವವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮ ಇಬ್ರಾಹಿಂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಕಾಸರಗೋಡು ಡಿಪಿಒ ವಿಜಯನ್ ಕುಮಾರ್ ಎಂ.ಕೆ, ಕಾಸರಗೋಡು ಎ.ಇ.ಒ. ಅಗಸ್ಟಿನ್ ಬರ್ನಾಡ್, ಕಾಸರಗೋಡು ಬಿಪಿಒ ಕಾಸೀಂ, ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಟಿ.ಇ.ಅಬ್ದುಲ್ಲ, ಉದ್ಯಮಿ ಗಿರಿಧರ್ ಕಾಮತ್ ಮೊದಲಾದವರು ಶುಭಹಾರೈಸಿದರು.
ಕೆ.ಸುರೇಂದ್ರನ್ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿ ಪ್ರಧಾನ ಸಂಚಾಲಕಿ ಕೆ.ಎ.ಯಶೋದ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿಠಲ ಶೆಟ್ಟಿ ಮತ್ತು ಬಳಗದಿಂದ ಗಾನಮೇಳ ಜರಗಿತು.




