ಕಾಸರಗೋಡು: ವಿದ್ಯಾನಗರ ಚಿನ್ಮಯಕಾಲನಿ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಶಾಲೆಯ 23ನೇ ವಾರ್ಷಿಕ ಸಮಾರಂಭ ಜನವರಿ 12ರಂದು ಕಾಸರಗೋಡು ಲಲಿತಕಲಾ ಸದನದಲ್ಲಿ ಜರುಗಲಿದೆ. ಬೆಳಗ್ಗೆ 9ಕ್ಕೆ ನಗರಸಭಾ ಸದಸ್ಯೆ ಸವಿತಾ ಐ.ಭಟ್ ಸಮಾರಂಭ ಉದ್ಘಾಟಿಸುವರು. 10ಕ್ಕೆ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯುವುದು. ವಯಲಿನ್ನಲ್ಲಿ ಪ್ರಭಾಕರ ಕುಂಜಾರು, ಡಾ. ಮಾಯಾ ಮಲ್ಯ ಕಾಸರಗೋಡು, ಮೃದಂಗದಲ್ಲಿ ಕೊವಲ್ ಕಣ್ಣನ್ ಕಾಞಂಗಾಡು, ರಾಜೀವ್‍ಗೋಪಾಲ್ ವೆಳ್ಳಿಕೋತ್, ಟಿ.ಕೆ ವಾಸುದೇವ ಕಾಞಂಗಾಡ್ ಸಹಕರಿಸುವರು.
ಸಂಜೆ 4ಕ್ಕೆ ನಡೆಯುವ ಸಂಗೀತಕಾರ್ಯಕ್ರಮದಲ್ಲಿ ಅಭಿಲಾಶ್ ಗಿರಿಪ್ರಸಾದ್ ಚೆನ್ನೈ ಅವರ ಹಾಡುಗಾರಿಕೆ ನಡೆಯುವುದು. ವಯಲಿನ್‍ನಲ್ಲಿ ಕರೈಕಲ್ ವೆಂಕಟಸುಬ್ರಹ್ಮಣ್ಯ ಚೆನ್ನೈ, ಮೃದಂಗದಲ್ಲಿ ಬಾಲಕೃಷ್ಣ ಕಾಮತ್ ಕೊಚ್ಚಿ, ಘಟಂನಲ್ಲಿ ಉಣ್ಣಿಕೃಷ್ಣನ್ ಮಂಜೂರ್, ಮೋರ್ಸಿಂಗ್‍ನಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರ್ ಸಹಕರಿಸುವರು.
ಯುವ ಗಾಯಕ:
ಅಭಿಲಾಶ್ ಗಿರಿಪ್ರಸಾದ್ ಚೆನ್ನೈ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತನ್ನ ಏಳರ ಹರೆಯದಲ್ಲಿ ಅಭ್ಯಾಸ ಆರಂಭಿಸಿದ್ದರು. ಪ್ರಸಿದ್ಧ ಸಂಗೀತ ವಿದ್ವಾಂಸ, ವಿದ್ವಾನ್ ಎ.ಮುರಳಿ ಅವರ ಶಿಷ್ಯತ್ವ ಪಡೆದು, ಸಂಗೀತ ಅಭ್ಯಾಸ ಆರಂಭಿಸಿದ್ದರು.ಮುಷ್ಣಂ ವಿ.ರಾಜಾರಾವ್ ಅವರಿಂದ ವಿಶೇಷ ಅಧ್ಯಯನ ನಡೆಸಿ, ದೇಶ, ವಿದೇಶಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಜತೆಗೆ ಪ್ರಸಿದ್ಧ ಗಾಯಕ ಭೀಮ್‍ಸೇನ್ ಜೋಷಿ ಅವರ ಶಿಷ್ಯ ಪ್ರೊ. ರಾಮಮೂರ್ತಿ ಅವರಿಂದಲೂ ಸಂಗೀತ ಅಭ್ಯಾಸ ನಡೆಸಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತದಲ್ಲಿ ಆಕಾಶವಾಣಿಯಿಂದ ಶ್ರೇಣೀಕೃತ ಕಲಾವಿದರಾಗಿ ಗುರುತಿಸಿದ್ದು, ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹತ್ತು ಹಲವು ಫೆಲೋಶಿಪ್, ಸ್ಕಾಲರ್‍ಶಿಪ್ ಇವರಿಗೆ ಲಭಿಸಿದೆ.





