HEALTH TIPS

ರಾಜ್ಯದ ಪ್ರಥಮ ಬೆಳೆ ವಿಮೆ ಜಿಲ್ಲೆಯಾಗಿ ಕಾಸರಗೋಡು: 9ರಂದು ಘೋಷಣೆ

          ಕಾಸರಗೋಡು: ಕಾಸರಗೋಡು ರಾಜ್ಯದ ಪ್ರಥಮ ಸಂಪೂರ್ಣ ಬೆಳೆ ವಿಮೆ ಜಿಲ್ಲೆಯಾಗಿ ಘೋಷಣೆಗೊಳ್ಳಲಿದೆ. ಜ.9ರಂದು ಕೃಷಿಸಚಿವ ವಿ.ಎಸ್.ಸುನಿಲ್ ಕುಮಾರ್ ಅವರು ಈ ಘೋಷಣೆ ನಡೆಸುವರು.
       ಜುಲೈ 1ರಿಂದ 7 ವರೆಗೆ ರಾಜ್ಯ ಮಟ್ಟದ ಬೆಳೆ ವಿಮೆ ಸಪ್ತಾಹ ಆಚರಣೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲೆ ಅತ್ಯಧಿಕ ಜನಪರವಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಎಯಲ್ಲಿ ಮಾಜಿ ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕೃಷಿಭವನಗಳ ಮುಖಾಂತರ ತೀವ್ರ ಯಜ್ಞ ಕಾರ್ಯಕ್ರಮ ನಡೆಸಲಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೃಷಿಯನ್ನೇ ಆಶ್ರಯಿಸಿ ಬದುಕುವ ಎಲ್ಲ ಮಂದಿಗೂ ಬೆಳೆಗಳನ್ನು ಯಥಾ ಸಮಯದಲ್ಲಿ ಆರ್ಥಿಕ ಸಹಾಯ ಮತ್ತು ವಿಮೆ ನಡೆಸಲು ಸಾಧ್ಯವಾಗಿತ್ತು.
        2017-18 ವರ್ಷದಲ್ಲಿ 6286 ಮಂದಿ, 2018-19ನೇ ವರ್ಷ 5061 ಮಂದಿ ಸದಸ್ಯತ್ವ ಪಡೆದ ಈ ಯೋಜನೆಯಲ್ಲಿ 2018-19 ವರ್ಷದಲ್ಲಿ ಶೇ 100 ಮಂದಿ ಸದಸ್ಯರಾಗಿದ್ದಾರೆ. ಬರಗಾಲ, ನೆರೆ, ಬಂಡೆಕಲ್ಲು ಉರುಳುವಿಕೆ, ಮಣ್ಣು ಕುಸಿತ, ಭೂಕಂಪ, ಕಡಲ್ಕೊರೆತ, ಸುಳಿಗಾಳಿ, ಕಡಲ್ಕೊರೆತ, ಸಿಡಿಲು, ಕಾಡುಬೆಂಕಿ, ಕಾಡು ಮೃಗಗಳ ಹಾವಳಿ ಸಹಿತ ವಿಕೋಪಗಳಿಂದ ಉಂಟಾಗುವ ನಾಶನಷ್ಟಗಳಿಗೆ ಸರಕಾರ ವತಿಯಿಂದ ಕೃಷಿಕರಿಗೆ ಲಭಿಸುವ ಈ ಸೌಲಭ್ಯ ದೊಡ್ಡ ಪ್ರಕಾಣದ ಸಾಂತ್ವನವಾಗಿದೆ. ಯೋಜನೆಯಲ್ಲಿ ಸೇರಪಡೆಗೊಳ್ಳುವ ಕೃಷಿಕರಿಗೆ ಸರಕಾರ ಆಯಾ ಸಮಯದಲ್ಲಿ ನಿಗದಿತ ಪ್ರೀಮಿಯಂ ಮೊಬಲಗು ಪಾವತಿಸಬೇಕು. ಪ್ರೀಮಿಯಂ ಪಾವತಿಸಿದ ದಿನದಿಂದ 7 ದಿನಗಳ ನಂತರ ನಷ್ಟಪರಿಹಾರಕ್ಕೆ ಅರ್ಹತೆ ಲಭಿಸುತ್ತದೆ.
   1995ರಲ್ಲಿ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ಆರಂಭಿಸಲಾಗಿತ್ತು. 21 ವರ್ಷಗಳ ನಂತರ ಪರಿಷ್ಕøತನಷ್ಟಪರಿಹಾರ ಮೊಬಲಗು ಕೃಷಿಕರಿಗೆ ಲಭಿಸಲಿದೆ. ವಿವಿಧ ಹಿನ್ನೆಎಗಳ ತಳಹದಿಯಲ್ಲಿ ಹಂತಹಂತವಾಗಿ ಮೊಬಲಗಿ ಪ್ರಮಾಣ ಹೆಚ್ಚಿಸುತ್ತಿರುವುದು ಸರಕಾರದ ಕೊಡುಗೆಯಾಗಿದೆ.
       ವಿಮೆ ಸದಸ್ಯಸ್ಯತ್ವಕ್ಕೆ ಸ್ವಂತವಾಗಿ, ಲೀಸ್ ಗೆ ಜಾಗ ಪಡೆದು ನಡೆಸುವ ಕೃಷಿ ನಡೆಸುವವರು ಅರ್ಹರಾಗಿದ್ದಾರೆ. ಭತ್ತದ ಕೃಷಿಯಲ್ಲಿ ಪ್ರತಿ ಕೃಷಿಕನೂ ಪ್ರ್ತೈಎಕ ಬೆಳೆ ವಿಮೆ ನಡೆಸಬೇಕು. ಆದರೆ ಸಾಮೂಹಿಕವಾಗಿ ಕೃಷಿ ನಡೆಸುವ ಗದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸಮಿತಿಗಳ ಕಾರ್ಯದರ್ಶಿ ಯಾ ಅಧ್ಯಕ್ಷ ಹೆಸರಲ್ಲಿ, ಗುಂಪು ಹಿನ್ನೆಲೆಯಲ್ಲಿ ಸದಸ್ಯತನ ಪಡೆಯಬಹುದು. ನೋಂದಣಿ ನಡೆಸಿದ ಗದ್ದೆಗಳಲ್ಲಿ ಒಬ್ಬರ ಗದ್ದೆಯಲ್ಲಿ ನಷ್ಟ ಸಂಭವಿಸಿದರೂ ಪರಿಹಾರ ಲಭಿಸಲಿದೆ.
       ಯೋಜನೆ ಪಂಚಾಯತ್ ಮಟ್ಟದಲ್ಲಿ ವಿವಿಧ ಕೃಷಿಭವನಗಳಲ್ಲಿ ಕೃಷಿಕರಿಗೆ ವಿಮೆ ಯೋಜನೆಯಲ್ಲಿ ಸದಸ್ಯತನ ಪಡೆಯುವ ಸೌಲಭ್ಯ ಏರ್ಪಡಿಸಲಾಗಿದೆ. ಕೃಷಿ ಸಿಬ್ಬಂದಿ ಜಾಗ ಸಂದರ್ಶನ ನಡೆಸಿ ಪ್ರೀಮಿಯಂ ಮೊಬಲಗು ಪರಿಶೀಲನೆ ನಡೆಸುವರು. ಈ ಮೊಬ;ಗು ಯೋಜನೆಗಾಗಿ ನೇಮಿಸಿದ ಏಜೆಂಟ್ ಮೂಲಕ ಯಾ ನೇರವಾಗಿ ಸಮೀಪದ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಯಾ ಸಹಕಾರಿ ಬ್ಯಾಂಕ್ ನಲ್ಲಿ ಪಾವತಿಸಬಹುದು. ಯೋಜನೆಯನ್ನುಗರಿಷ್ಟ ಮಟ್ಟದಲ್ಲಿ ಕೃಷಿಕರಿಗೆ ತಲಪಿಸುವ ಮಟ್ಟಿಗೆ ಕೃಷಿ ಅಧಿಕಾರಿ ಸಿಬ್ಬಂದಿಗೆ  ಸಾರ್ವಜನಿಕ ಮಾನದಂಡಗಳಿಗೆ ಅನುಗುಣವಾಗಿ ಏಜೆಂಟರನ್ನು ನೇಮಿಸುವರು. ಕೃಷಿಕರಿಗೆ, ಏಜೆಂಟರಿಗೆ ಪ್ರೀಮಿಯಂ ಪಾವತಿಸಿ ಕೃಷಿ ಭವನಕ್ಕೆ ರಶೀದಿ ಸಲ್ಲಿಸಬೇಕು. ಈ ರಶೀದಿಯ ಹಿನ್ನೆಲೆಯಲ್ಲಿ ಕೃಷಿಕನಿಗೆ ಪಾಲಿಸಿ ಲಭಿಸಲಿದೆ.
    ಬೆಳೆ ವಿಮೆ ಸಂರಕ್ಷಣೆ ಹೊಂದಿರುವ ಬೆಳೆಗಳ ಪರಿಹಾರ ಮೊಬಲಗನ್ನು 2017 ರಿಂದ ಪುನರ್ ರಚಿಸಿ 12 ಪಟ್ಟ ಅಧಿಕಗೊಳಿಸಲಾಗಿದೆ. ತೆಂಗು,ಬಾಳೆ, ರಬ್ಬರ್, ಕರಿಮೆಣಸು, ಏಲಕ್ಕಿ, ಗೇರುಬೀಜ, ಅನಾನಾಸು, ಕಾಫಿ, ಶೂಂಠಿ, ಚಹಾ, ಹಳದಿ, ಕೊಕ್ಕೋ, ಎಳ್ಳು, ತರಕಾರಿ, ವೀಳ್ಯದೆಲೆ, ಗೆಡ್ಡೆ-ಗೆಣಸು, ಹಬ್ಬು, ಹೊಗೆಸೊಪ್ಪು, ಭತ್ತ, ಮಾವಿನಕಾಯಿ, ಕಿರುಧಾನ್ಯಗಳು ಇತ್ಯಾದಿ ಬೆಳೆಗಳಿಗೆ ವಿಮೆ ಸಂರಕ್ಷಣೆಯಿದೆ. ರಾಜ್ಯದ ಎಲ್ಲ ಭತ್ತದ ಕೃಷಿಕರೂ ಈ ಯೋಜನೆಯ ಸದಸ್ಯರಾಗಿದ್ದಾರೆ. ಕೀಟಬಾಧೆಯಿಂದ ಭತ್ತದ ಕೃಷಿಗೆ ಉಂಟಾಗುವ ನಾಶ-ನಷ್ಟಕ್ಕೂ ವಿಮೆ ಸಂರಕ್ಷಣೆ ದೊರೆಯಲಿದೆ.
          ನಷ್ಟ ಪರಿಹಾರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?:
   ನಾಶ-ನಷ್ಟ ಸಂಭವಿಸಿದ 15 ದಿನಗಳೊಳಗೆ ನಿಗದಿತ ಫಾರಂನಲ್ಲಿ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಬೇಕು. ಕೃಷಿ ಭವನ ಸಿಬ್ಬಂದಿ ಆಗಮಿಸಿ ತಪಾಸಣೆ ನಡೆಸುವವರೆಗೆ ನಷ್ಟ ಸಂಭವಿಸಿದ ಬೆಳೆಯನ್ನು ಅದೇ ರೂಪದಲ್ಲಿ ಇರಿಸಬೇಕು. ಕೃಷಿ ಭವನಕ್ಕೆ ಅರ್ಜಿ ಸಲ್ಲಿಸಿದ 4 ದಿನಗಳಲ್ಲಿ ಸಿಬ್ಬಂದಿಗೆ ನಷ್ಟ ಸಂಭವಸಿದ ಜಾಗಕ್ಕೆ ಆಗಮಿಸಿ ತಪಾಸಣೆ ನಡೆಸಿ, ಪ್ರಧಾನ ಕೃಷಿ ಅಧಿಕಾರಿಗೆ ವರದಿ ಸಲ್ಲಿಸುವರು.
         ಪ್ರೀಮಿಯಂ ಮತ್ತು ಪರಿಹಾರ:
    ಹತ್ತು ತೆಂಗಿನಮರಗಳಿರುವ ಕೃಷಿಕನಿಗೆ ಒಂದು ತೆಂಗಿನಮರಕ್ಕೆ 2 ರೂ. ರೂಪದಲ್ಲಿ ಒಂದು ವರ್ಷಕ್ಕೆ , 5 ರೂ. ನಂತೆ ಮೂರು ವರ್ಷಗಳ ಕಾಲವೂ ಪ್ರೀಮಿಯಂ ಪಾವತಿಸಬೇಕು. ಈ ಮೂಲಕ ತೆಂಗಿನಮರವೊಂದಕ್ಕೆ 2 ಸಾವಿರ ರೂ. ನಷ್ಟಪರಿಹಾರ ಲಭಿಸಲಿದೆ. ಹತ್ತು ಮರಗಳಿರುವ ಕರಿಮೆಣಸು ಕೃಷಿಕನಿಗೆ 1.50 ರೂ. ಒಂದು ವರ್ಷಕ್ಕೆ, ಮೂರು ರೂ. ಮೂರು ವಷ್ರ್ಕೂ ಪಾವತಿಸಿದರೆ ಮರವೊಂದಕ್ಕೆ 200 ರೂ.ನಂತೆ ಮರವೊಂದಕ್ಕೆ 200 ರೂ. ಪರಿಹರ ಲಭಿಸಲಿದೆ. 25 ರಬ್ಬರ್ ಮರಗಳಿರುವ ಕೃಷಿಕನಿಗೆ ಮರವೊಂದಕ್ಕೆ ತಲಾ 3 ರೂ. ವರ್ಷಕ್ಕೆ, 7.5 ರೂ.ನಂತೆ ಮೂರು ವರ್ಷ ಪಾವತಿಸಿದರೆ ಮರವೊಂದಕ್ಕೆ ಒಂದು ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಇದೇ ರೀತಿಯಲ್ಲಿ ವಿವಿಧ ಬೆಳೆಗಳಿಗೆ ಸಂರಕ್ಷಣೆ ಲಭಿಸಲಿದೆ. ದೀರ್ಘಾವಧಿ ಬೆಳೆಗಳಿಗೆ ಪ್ರತ್ಯೇಕ ಸಂರಕ್ಷಣೆ ಇರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries