ಕಾಸರಗೋಡು: ಜಿಲ್ಲೆಯ ಪಡಿತರ ಅಂಗಡಿಗಳ ಮೂಲಕ ವಿತರಣೆ ನಡೆಸುವ ಆಹಾರ ಧಾನ್ಯಗಳ ಗುಣಮಟ್ಟ ಸಂಬಂಧ ಮತ್ತು ಪಡಿತರ ಅಂಗಡಿಗಳ ಚಟುವಟಿಕೆಗಳ ಸಂಬಂಧ ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಕಚೇರಿಯೊಂದನ್ನು ಆರಂಭಿಸಲಾಗಿದೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದ ಜಿಲ್ಲಾ ಸಪ್ಲೈ ಕಚೇರಿಯೊಂದಿಗೆ ಈ ಕಚೇರಿಯೂ ಚಟುವಟಿಕೆ ನಡೆಸುತ್ತಿದೆ. ಆಹಾರ ಭದ್ರತೆ ಕಾನೂನು 2013 ಪ್ರಕಾರ ಪಡಿತರ ಅಂಗಡಿಗಳು ದಕ್ಷತೆಯಿಂದೊಡಗೂಡಿರಬೇಕು ಮತ್ತು ಉತ್ತಮ ಗುಣಮಟ್ಟದ ಧಾನ್ಯಗಳನ್ನು ವಿತರಿಸಬೇಕು. ಈ ಕುರಿತು ದೂರುಗಳಿದ್ದಲ್ಲಿ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಚೇರಿ ಆರಂಭಿಸಲಾಗಿದೆ. ಈ ದೂರುಗಳಿದ್ದಲ್ಲಿ ಜಿಲ್ಲಾ ಮಟ್ಟದ ಪರಿಹಾರ ನೋಡೆಲ್ ಅಧಿಕಾರಿಯಾಗಿರುವ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರನ್ನು ನೇರವಾಗಿ ಯಾ ಈ ಮೇಲ್ ಮುಖಾಂತರ ಸಲ್ಲಿಸಬಹುದು. ಪಡಿತರ ಸಾಮಾಗ್ರಿಗಳ ಅಳತೆ, ಬೆಲೆ, ತೂಕ, ಪಡಿತರ ಅಂಗಡಿಗಳ ಚಟುವಟಿಕೆಯ ಸಮಯ, ಪಡಿತರ ಚೀಟಿಯಲ್ಲಿ ಹೆಸರು ಹೊಂದಿದ್ದರೂ, ರೇಷನ್ ನೀಡಲು ಅಂಗಡಿ ಮಾಲೀಕ ನಕಾರ ತಿಳಿಸಿದಲ್ಲಿ ದೂರು ಸಲ್ಲಿಸಬಹುದು. ದೂರು ಸಲ್ಲಿಸಬೇಕಾದ ಈ ಮೇಲ್ ವಿಳಾಸ:dgrokasaragod@gmail.com ಹೆಚ್ಚುವರಿ ದಂಡನಾಧಿಕಾರಿ ಅವರ ದೂರವಾಣಿ ಸಂಖ್ಯೆ:9447726900ಜಿಲ್ಲಾ ಸಪ್ಲೈ ಕಚೇರಿ ದೂರವಾಣಿ ಸಂಖ್ಯೆ:9188527328.





