ಕಾಸರಗೋಡು: ಮಹಾತ್ಮಾ ಗಾಂಧಿ ನೌಕರಿ ಖಾತರಿ ಯೋಜನೆಯ ಚಟುವಟಿಕೆಗಳಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಪಟ್ಟಿಯಲ್ಲಿ ಸ್ಥಾನ ಪಡೆದು ಜಿಲ್ಲೆಯ ಪರಪ್ಪ ಬ್ಲಾಕ್ ಪಂಚಾಯತ್ ನಾಡಿಗೆ ಹಿರಿಮೆ ತಂದಿದೆ. ಖಾತರಿ ಯೋಜನೆಯ ಆಸ್ತಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ರಾಜ್ಯದಲ್ಲೇ ತೃತೀಯ ಸ್ಥಾನ ಹೊಂದಿದೆ. ಈ ಬ್ಲೋಕ್ ನಲ್ಲಿ ಯೋಜನೆ ಪ್ರಕಾರ 2.65 ಕೋಟಿ ರೂ. ವೆಚ್ಚಮಾಡಲಾಗಿದೆ. ಇದರಲ್ಲಿ ಕೋಡೋಂ-ಬೇಳೂರು, ಪನತ್ತಡಿ ಗ್ರಾಮಪಂಚಾಯತ್ ಗಳು ಮೊದಲ ಸ್ಥಾನದಲ್ಲಿವೆ. 309 ವ್ಯಕ್ತಿಗತ ಆಸ್ತಿ ಅಭಿವೃದ್ಧಿ ಯೋಜನೆಗಳು ಬ್ಲೋಕ್ ನಲ್ಲಿ ಈಗಾಗಲೇ ಪೂರ್ಣಗೊಳಿಸಲಾಗಿದೆ. ಕೂಲಿ ರೂಪದಲ್ಲಿ ಮತ್ತು ಮೆಟೀರಿಯಲ್ ರೂಪದಲ್ಲಿ ಒಟ್ಟು 2458.49 ಲಕ್ಷ ರೂ. ವೆಚ್ಚಮಾಡಲಾಗಿದೆ.
ವ್ಯಕ್ತಿಗತ ಸೊತ್ತು ಅಭಿವೃದ್ಧಿ ಯೋಜನೆಗಳು:
ವ್ಯಕ್ತಿಗತ ಸೊತ್ತು ಅಭಿವೃದ್ಧಿ ಯೋಜನೆಗಳಿಗೆ ಇಲ್ಲಿ ಆದ್ಯತೆ ನೀಡಲಾಗಿದ್ದು, ಕೃಷಿ ವಲಯ ಈ ನಿಟ್ಟಿನಲ್ಲಿ ಪ್ರಥಮ ಸ್ಥಾನದಲ್ಲಿದೆ. ಕೃಷಿಕರು ಅಧಿಕವಾಗಿರುವ ಈ ಪ್ರದೇಶದಲ್ಲಿ ಸಂಯೋಜಿತ ರೂಪದಲ್ಲಿ ಯೋಜನೆ ರಚಿಸಲಾಗಿದೆ. ಹಸುವಿನ ಹಟ್ಟಿ, ಮೇಕೆಯ ಗೂಡು, ಕೋಳಿ ಗೂಡು, ಪೌಲ್ಟ್ರಿ ಶೆಡ್ ಇತ್ಯದಿಗಳ ನಿರ್ಮಾಣ ನಡೆಸಲಾಗಿದೆ. ಬ್ಲೋಕ್ ಮಟ್ಟದಲ್ಲಿ 254 ಹಸುವಿನ ಹಟ್ಟಿ, 47 ಮೇಕೆಯ ಗೂಡು, 8 ಕೋಳಿ ಗೂಡು, ಪೌಲ್ಟ್ರಿ ಶೆಡ್ ಯೋಜನೆಯ ಅಂಗವಾಗಿ ನಿರ್ಮಿಸಲಾಗಿದೆ. ಕೋಡೋ-ಬೇಳೂರು, ಪನತ್ತಡಿ ಗ್ರಾಮಪಂಚಾಯತ್ ಗಳು ಮುಂದಿನ ಸಾಲಿನಲ್ಲಿವೆ. ಕೋಡೋ-ಬೇಳೂರಿನಲ್ಲಿ 101 ವ್ಯಕ್ತಿಗತ ಸೊತ್ತುಗಳು, ಪನತ್ತಡಿಯಲ್ಲಿ 65 ವೈಕ್ತಿಗತ ಸೊತ್ತುಗಳನ್ನು ನಿರ್ಮಿಸಲಾಗಿದೆ.
ವ್ಯಕ್ತಿಗತ ಸೊತ್ತು ನಿರ್ಮಾಣಕ್ಕೆ ಅಗತ್ಯವಿರುವ ಪ್ರಾಥಮಿಕ ಭಂಡವಾಳ ಕೃಷಿಕರೇ ವಹಿಸಬೇಕು. ನಂತರ ಇದಕ್ಕಿರುವ ಎಲ್ಲ ವೆಚ್ಚವನ್ನೂ ಕೇಂದ್ರ ನೀಡಲಿದೆ. ಒಂದೊಮ್ಮೆ ಪ್ರಾಥಮಿಕ ಭಂಡವಾಳ ವಹಿಸಲು ಅಶಕ್ತರಾದ ಕೃಷಿಕರಿಗೆ ಗ್ರಾಮಪಂಚಾಯತ್ ನ ಸಹಾಯದೊಂದಿಗೆ ಬ್ಯಾಂಕ್ ಗಳ ಸಂಬಂ ಸಾಲ ಲಭಿಸುವ ಅವಕಾಶಗಳೂ ಇವೆ. ಇದರೊಂದಿಗೆ ಸೊತ್ತು ಅಭಿವೃದ್ಧಿ ಯೋಜನೆಗಳ ಅಂಗವಾಗಿ ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳ ರಸ್ತೆ ಕಾಂಕ್ರೀಟೀಕರಣ, ಬಾವಿಗಳು ಇತ್ಯಾದಿ ನಿರ್ಮಾಣ ಬ್ಲೋಕ್ ನೇತೃತ್ವದಲ್ಲಿ ನಡೆಯಲಿದೆ.
ಜಲಸಂರಕ್ಷಣೆ:
ಕುಡಿಯುವ ನೀರಿಗಾಗಿ ವಿವಿಧ ನೀರಾವರಿ ಚಟುವಟಿಕೆಗಳು ನೌಕರಿ ಖಾತರಿ ಯೋಜನೆಯಲ್ಲಿ ಬ್ಲೋಕ್ ನಲ್ಲಿ ನಡೆಸಲಾಗಿದೆ. 1983.17 ಲಕ್ಷ ರೂ. ಈ ನಿಟ್ಟಿನಲ್ಲಿ ಈ ವರೆಗೆ ವೆಚ್ಚಮಡಲಾಗಿದೆ. ಬಾವಿಗಳ, ಕೆರೆಗಳನಿರ್ಮಾಣ, ಮಣ್ಣು, ಜಲ ಸಂರಕ್ಷಣೆ, ಸಂಯೋಜಿತ ರೀತಿ ಮಳೆನೀರು ಇಂಗುಗುಂಡಿಗಳ, ಜಲಸಂಗ್ರಹಾಗಾರಗಳ ನಿರ್ಮಾಣ, ಬರಗಾಲ ನಿವಾರಣೆ ಅಂಗವಾಗಿ ಮರವಾಗಬಲ್ಲ ಸಸಿಗಳ ನೆಡುವಿಕೆ ಇತ್ಯಾದಿಗಳಿಗೆ ಮಹತ್ವ ನೀಡಲಾಗಿದೆ.
100 ದಿನಗಳನ್ನು ಪಡೆದ 780 ಕುಟುಂಬಗಳು:
ಜಿಲ್ಲೆಯ ಪ್ರತಿ ಕುಟುಂಬಕ್ಕೆ 100 ನೌಕರಿ ದಿನಗಳನ್ನು ಖಚಿತಪಡಿಸುವ ಜಿಲ್ಲೆಯ ಅತ್ಯುತ್ತಮ ಬ್ಲೋಕ್ ಗಳಲ್ಲಿ ಪ್ರಥಮ ಸ್ಥಾನ ವನ್ನು ಪರಪ್ಪ ಪಡೆದಿದೆ. ಈ ವರೆಗೆ 7,73,006 ನೌಕರಿ ದಿನಗಳನ್ನು ಸೃಷ್ಟಿಸಿದೆ. 780 ಕುಟುಂಬಗಳು 100 ನೌಕರಿ ದಿನಗಳನ್ನು ಪೂರೈಸಿವೆ. ಪನತ್ತಡಿ ಗ್ರಾಮಪಂಚಾಯತ್ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. 306 ಕುಟುಂಬಗಳು ಇಲ್ಲಿ ನೂರು ನೌಕರಿ ದಿನಗಳನ್ನು ಪಡೆದಿವೆ. ಬಳಾಲ್ ಗ್ರಾಮಪಂಚಾಯತ್ ನಲ್ಲಿ 130, ಈಸ್ಟ್-ಏಳೇರಿ ಗ್ರಾಮಪಂಚಾಯತ್ ನಲ್ಲಿ 106, ಕಳ್ಳಾರ್ ಗ್ರಾಮಪಂಚಾಯತ್ ನಲ್ಲಿ 71, ವೆಸ್ಟ್ ಏಳೇರಿ ಗ್ರಾಮಪಂಚಾಯತ್ ನಲ್ಲಿ 70, ಕೋಡೋಂ-ಬೇಳೂರು ಗ್ರಾಮಪಂಚಾಯತ್ ನಲ್ಲಿ 69, ಕಿನಾನೂರು-ಕರಿಂದಳಂ ಪಂಚಾಯತ್ ನಲ್ಲಿ 28 ಕುಟುಂಬಗಳು ಈ ವರೆಗೆ ನೂರು ನೌಕರಿ ದಿನ ಪಡೆದಿವೆ. ಪರಿಶಿಷ್ಟ ಪಂಗಡ ವಿಭಾಗದ 465 ಕುಟುಂಬಗಳು ಬ್ಲೋಕ್ ನಲ್ಲಿ 100 ನೌಕರಿ ದಿನಗಳನ್ನು ಪೂರೈಸಿವೆ.
ಅಭಿಮತ:
ಕಲ್ಯಾಣ ಯೋಜನೆಗಳಿಗೆ ಆದ್ಯತೆ: ಬ್ಲಾಕ್ ಪಂಚಾಯತ್ ಅಧ್ಯಕ್ಷ
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ ಜನತೆಯ ಭವಷ್ಯದ ಬಗ್ಗೆ ಚಿಂತನೆ ನಡೆಸಿ, ಸೊತ್ತು ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗೆ ಆದ್ಯತೆ ನೀಡಲಾಗಿದೆ. ಅದು ಯಶಸ್ವಿಯೂ ಆಗಿದೆ.
ಪಿ.ರಾಜನ್, ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷ.