ಕಾಸರಗೋಡು: ಸಮಗ್ರ ತರಬೇತಿ ಕಾರ್ಯಕ್ರಮ ಕೋಟಪ್ಪುರಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು.
ನೀಲೇಶ್ವರ ನಗರಸಭೆ ವತಿಯಿಂದ ಸಮಗ್ರ ಶಿಕ್ಷಣ ಪೆÇೀಷಣೆ ಯೋಜನೆ ಅಂಗವಾಗಿ ನಗರಸಭೆ ವ್ಯಾಪ್ತಿಯ 8ರಿಂದ ಹೈಯರ್ ಸೆಕೆಂಡರಿ ವರೆಗಿನ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಿಸಿ, ಫಲಿತಾಂಶ ವೃದ್ಧಿಗೊಳಿಸುವ ಉದ್ದೇಶದಿಂದ, ಅವರ ಮನೋಧೈರ್ಯ ಅ„ಕಗೊಳಿಸಿ, ಅಂತರ್ ದೃಷ್ಟಿ, ಸಾಮಾಜಿಕ ಜಾಗೃತಿ ವಿಕಸನಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2 ತಿಂಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಪರಿಣತಿ ಪಡೆದ ಶಿಕ್ಷಕರು ವಿವಿಧ ವಿಚಾರಗಳಲ್ಲಿ ತರಗತಿ ನಡೆಸುವರು. ಜೊತೆಗೆ ಪರೀಕ್ಷೆಯ ಭೀತಿ ಇಲ್ಲದೆ ಸಾರ್ವಜನಿಕ ಪರೀಕ್ಷೆಗಳನ್ನು ಬರೆಯುವ ನಿಟ್ಟಿನಲ್ಲಿ ಮನಶಾಸ್ತ್ರ ತರಗತಿಗಳೂ ನಡೆಯಲಿವೆ.
ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿ.ಗೌರಿ `ಈಝಿ' ಎಂಬ ಹೆಸರಿನ ಇಂಗ್ಲಿಷ್ ಹೊತ್ತಗೆ ಬಿಡುಗಡೆಗೊಳಿಸಿದರು. ಸದಸ್ಯ ಪಿ.ವಿ.ರಾಮಚಂದ್ರನ್, ಪ್ರಾಂಶುಪಾಲೆ ಬಿಂದು ಸಿ.ಕೆ., ಕೆ.ರಾಜಿ ಮೊದಲಾದವರು ಉಪಸ್ಥಿತರಿದ್ದರು. ಹೈಯರ್ ಸೆಕೆಂಡರಿ ಪ್ರಾಂಶುಪಾಲ ಅಬ್ದುಲ್ ಲತೀಫ್ ಸ್ವಾಗತಿಸಿದರು. ಮುಖ್ಯಶಿಕ್ಷಕ ರಾಜು ಮುಟ್ಟತ್ ವಂದಿಸಿದರು.




