ಕಾಸರಗೋಡು: ಅಂಚೆ ಇಲಾಖೆಯ ಎಡರಂಗ ಬೆಂಬಲಿತ ಕಾರ್ಮಿಕ ಸಂಘಟನೆಯೊಂದು ಹೊರತಂದಿರುವ ಹೊಸವರ್ಷದ ಕ್ಯಾಲೆಂಡರ್ ಕೇಂದ್ರ ಸರ್ಕಾರ ಮತ್ತು ಗೃಹಸಚಿವರನ್ನು ಅವಮಾನಿಸುವ ರೀತಿಯಲ್ಲಿ ಮುದ್ರಣಗೊಂಡಿರುವುವ ಹಿನ್ನೆಲೆಯಲ್ಲಿ ಈ ಕ್ಯಾಲೆಂಡರ್‍ನ್ನು ವಿತರಣೆ ನಡೆಸದಿರುವಂತೆ ಅಂಚೆ ಅಧೀಕ್ಷಕರು ಆದೇಶಿಸಿದ್ದಾರೆ.
ಎಡರಂಗ ಬೆಂಬಲಿತ ಎನ್‍ಎಪ್‍ಪಿಇ ಎಂಬ ಕಾರ್ಮಿಕ ಸಂಘಟನೆ ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸುವ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಷಾ ಅವರನ್ನು ಅವಮಾನಿಸುವ ರೀತಿಯಲ್ಲಿ ಕ್ಯಾಲೆಂಡರ್ ಮುದ್ರಿಸಿರುವ ಬಗ್ಗೆ ಅಂಚೆ ಇಲಾಖೆಯ ಇತರ ಸಿಬ್ಬಂದಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ರೀತಿಯ ಕ್ಯಾಲೆಂಡರ್ ಮುದ್ರಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು, ಜತೆಗೆ ಸಂಬಂಧಪಟ್ಟವರಿಂದ ಸ್ಪಷ್ಟೀಕರಣ ಕೇಳಲಾಗುವುದು ಎಂದು ಜನರಲ್ ಅಡ್ಮಿನಿಸ್ಟ್ರೇಶನ್ ಸಹಾಯಕ ನಿರ್ದೇಶಕ ಎನ್. ಜಾನಕಿರಾಮನ್ ತಿಳಿಸಿದ್ದಾರೆ.
ಇದೇ ಸಂದರ್ಭ ಕಾಂಗ್ರೆಸ್ ಬೆಂಬಲಿತ ಎಫ್‍ಎನ್‍ಪಿಓ ಎಂಬ ಸಂಘಟನೆ ರಾಷ್ಟ್ರೀಯ ಮುಖಂಡರ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಪ್ರಕಟಿಸಿದ್ದು, ಈ ಕ್ಯಾಲೆಂಡರ್ ಯಥಾಪ್ರಕಾರ ವಿತರಿಸುವಂತೆ ಸೂಚಿಸಲಾಗಿದೆ.




