ಪೆರ್ಲ: ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.12ರಂದು ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ಮತ್ತು ಹೆತ್ತವರ ದಿನಾಚರಣೆ ನಾನಾ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಸಂಜೆ 3.30ಕ್ಕೆ ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್. ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಸ್ವರ್ಗ, ಕೆಂಗಣಾಜೆ, ಅಡ್ಕಸ್ಥಳ, ಶಿವಗಿರಿ, ಪೆರ್ಲವಿವೇಕಾನಂದ ಶಿಶು ಮಂದಿರ(ನಾಲಂದ), ಸರ್ಪಮಲೆ ಹಾಗೂ ಬಾಲ ಭಾರತಿ ಅಂಗನವಾಡಿ ಪುಟಾಣಿಗಳ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಪೆರ್ಲ ಶಾಲಾ ಶಿಕ್ಷಕ, ಯಕ್ಷಗಾನ ಭಾಗವತ ಡಾ. ಸತೀಶ್ ಪುಣಿಂಚಿತ್ತಾಯ ಅಧ್ಯಕ್ಷತೆ ವಹಿಸುವರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಅರ್ಥಶಾಸ್ತ್ರ ಉಪನ್ಯಾಸಕಿ ವಾಣಿ ಕೆ. ಪ್ರಧಾನ ಅತಿಥಿಗಳಾಗಿ ಭಾಗವಹಿಸುವರು. ಪಡ್ರೆ ವಾಣೀನಗರ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕ ಗೋಪಾಲ ಕಾಟುಕುಕ್ಕೆ ಸ್ವಸ್ತಿ ವಾಚನ ನಡೆಸುವರು. ಎಣ್ಮಕಜೆ ಗ್ರಾ.ಪಂ. ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ., ಹೃಷಿಕೇಶ ವಿ.ಎಸ್., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಪೂಕರೆ, ಮಶಾತೃಸಂಘದ ಅಧ್ಯಕ್ಷೆ ಪ್ರಿಯಾ ಚಾಕಟೆಕುಮೇರಿ ಉಪಸ್ಥಿತರಿರುವರು.
ರಾತ್ರಿ 8.30ರಿಂದ ಸ್ವರ್ಗ ಶಾಲಾ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಬಾಲಕೃಷ್ಣ ಉಡ್ಡಂಗಳ ನಿರ್ದೇಶನದಲ್ಲಿ 'ಗುರುದಕ್ಷಿಣೆ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.




