ಮುಳ್ಳೇರಿಯ: ಕಾರಡ್ಕ ಕೃಷಿ ಕಲ್ಯಾಣ ಸಹಕಾರಿ ಸಂಘದ ನೇತೃತ್ವದಲ್ಲಿ ಆದೂರು ಕುಕ್ಕಂಗೈ ಮೂಳಿ ಎಂಬಲ್ಲಿ ಬಂಜರು ಭೂಮಿಯಲ್ಲಿ "ಬಿತ್ತುವ ನಲ್ಮೆಯ ಹೊಲದಲ್ಲಿ" ಎಂಬ ಸಂದೇಶದೊಂದಿಗೆ 2019 ರ ಆಗಸ್ಟ್ 2 ರಂದು ಬೆಳೆಸಿದ ಭತ್ತದ ಜೈವ ಅಕ್ಕಿ ವಿತರಣೆಯನ್ನು ಕರ್ಮಂತೋಡಿಯಲ್ಲಿ ಕಾರಡ್ಕ ಬ್ಲಾಕ್ ಪ0ಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ಉದ್ಘಾಟಿಸಿದರು.
ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಕುಂಞÂ್ಞ ರಾಮನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸಂಘಟನೆಯ ನೇತಾರರು ಉಪಸ್ಥಿತರಿದ್ದರು. ಸ0ಘದ ನಿರ್ದೇಶಕ ತಂಬಾನ್ ಸ್ವಾಗತಿಸಿ, ಕಾರ್ಯದರ್ಶಿ ರತೀಶನ್ ಕಾರ್ಯಕ್ರಮ ನಿರೂಸಿ ವಂದಿಸಿದರು.





