ಕುಂಬಳೆ: ನಾರಾಯಣಮಂಗಲ ಶ್ರೀನಿಧಿಯಲ್ಲಿ ಇತ್ತೀಚೆಗೆ ನಡೆದ ಸಿರಿಗನ್ನಡ ವೇದಿಕೆ ಕಾಸರಗೋಡು ಗಡಿನಾಡ ಘಟಕದ ಹೇಮಂತ ಸಾಹಿತ್ಯೋತ್ಸವ ಸಮಾರಂಭದಲ್ಲಿ ಸಿರಿಗನ್ನಡ ವೇದಿಕೆ ಕೇಂದ್ರ ಘಟಕದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಹಾಗೂ ಸಿರಿಗನ್ನಡ ವೇದಿಕೆ ಕಾಸರಗೋಡು ಗಡಿನಾಡ ಘಟಕದ ಮಹಿಳಾ ವಿಭಾಗದ ನೂತನ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಲಾದ ಶ್ರದ್ದಾ ನಾಯರ್ಪಳ್ಳ ಅವರಿಗೆ ಪ್ರಮಾಣ ಪತ್ರ ಹಾಗೂ ಲಾಂಛನ ನೀಡಿ ವೇದಿಕೆಯ ಕೇಂದ್ರ ಘಟಕದ ಅಧ್ಯಕ್ಷ ಎಂ.ಎಸ್.ವೆಂಕಟರಾಮಯ್ಯ ಬೆಂಗಳೂರು ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ವಿದ್ವಾನ್ ಬೆಳ್ಳಿಗೆ ನಾರಾಯಣ ಮಣಿಯಾಣಿ, ಜಿಲ್ಲಾ ವಾರ್ತಾ ಇಲಾಖೆಯ ಕನ್ನಡ ಮಾಧ್ಯಮ ಅಧಿಕಾರಿ ವೀ.ಜಿ.ಕಾಸರಗೋಡು, ಶಿಕ್ಷಕ, ಭಾಗವತ ಡಾ.ಸತೀಶ ಪುಣ್ಚಿತ್ತಾಯ ಪೆರ್ಲ, ಟಿ.ಶಂಕರನಾರಾಯಣ ಭಟ್, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಮೊದಲಾದವರು ಉಪಸ್ಥಿತರಿದ್ದರು.
ಸಿರಿಗನ್ನಡ ವೇದಿಕೆ-ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಅಧ್ಯಕ್ಷೆಗೆ ಅಧಿಕಾರ ಹಸ್ತಾಂತರ
0
ಜನವರಿ 08, 2020