ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆಬ್ರವರಿ 11ರಂದು ಜರಗಲಿದ್ದು ಆ ಬಗೆಗೆ ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್, ಸೇವಾ ಸಮಿತಿ ಹಾಗೂ ಮಹಿಳಾ ಸಮಿತಿಗಳ ಸಂಯುಕ್ತ ವಿಶೇಷ ಸಭೆ ಶ್ರೀ ಕ್ಷೇತ್ರದಲ್ಲಿ ಜರಗಿತು.
ಸೇವಾ ಟ್ರಸ್ಟ್ ಅಧ್ಯಕ್ಷೆ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಸೇವಾ ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ, ಮೀಯಪದವು ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ನೂತನ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು ಪ್ರಧಾನ ಸಂಚಾಲಕರಾಗಿ ಚಂದ್ರಶೇಖರ ಎಂ.ಐ.ಎಂ. ಮೀಯಪದವು, ಸಹ ಸಂಚಾಲಕರಾಗಿ ಸದಾಶಿವ ರೈ ಬೆಜ್ಜಂಗಳ, ಮಹಾಬಲ ಶೆಟ್ಟಿ ಮೀಯಪದವು ಗುತ್ತು, ಶಂಕರ ಸಿ.ಚಿಗುರುಪಾದೆ, ಅಶ್ವಿನ್ ಕಲ್ಲಗದ್ದೆ, ಜಗದೀಶ ಆಳ್ವ ದೇರಂಬಳ ಗುತ್ತು, ಸಂತೋಷ್ ಪೂಜಾರಿ ಚಿಗುರುಪಾದೆ ಅವರನ್ನು ಆರಿಸಲಾಯಿತು.
ಉತ್ಸವ ಸಮಿತಿ ಮಹಿಳಾ ಪ್ರಧಾನ ಸಂಚಾಲಕಿ ಜಯ ಪಜಿಂಗಾರು, ಸಹಸಂಚಾಲಕಿಯರಾಗಿ ವಿಜಯಲಕ್ಷ್ಮಿ ಟಿ.ಆರ್, ಪ್ರೇಮ ಕಲ್ಲಗದ್ದೆ, ಅನೂಷ ಕೆದುಪಡ್ಪು, ಶಾಂತಾ ಉಪೇಂದ್ರ ಆಚಾರ್ ಪಜಿಂಗಾರ್, ಚಂದ್ರಕಲಾ ಚಿಗುರುಪಾದೆ, ದೇವಕಿ ಚಿಗುರುಪಾದೆ ಅವರನ್ನು ಆರಿಸಲಾಯಿತು. ಟ್ರಸ್ಟ್ ಕಾರ್ಯದರ್ಶಿ ಶ್ರೀಧರ ರಾವ್ ಆರ್.ಎಂ. ಸ್ವಾಗತಿಸಿ, ಕೋಶಾಧಿಕಾರಿ ಜಗದೀಶ ಶೆಟ್ಟಿ ಎಲಿಯಾಣ ವಂದಿಸಿದರು.




