ಮಂಜೇಶ್ವರ: ಗೆಳೆಯರ ಬಳಗ ಬಲ್ಲಂಗುಡೇಲು ವತಿಯಿಂದ ಜ.19 ರಂದು ಮೂಡಂಬೈಲ್ ಶಾಲಾ ವಠರದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ವೈದ್ಯಕೀಯ ಶಿಬಿರ ಹಾಗು ಉಚಿತ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಜರಗಲಿದೆಯೆಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಸ್ಥಾಪಕ ಸದಸ್ಯ ಜಯಾನಂದ ಬಲ್ಲಂಗುಡೇಲು ಅವರ ಸ್ಮರಣಾರ್ಥವಾಗಿ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರುಗಳ ತಂಡದಿಂದ ಉಚಿತ ವೈದ್ಯಕೀಯ ಶಿಬಿರ ಹಾಗು ಬಿ.ಪಿ.ಎಲ್. ಕಾರ್ಡುದಾರರಿಗೆ ಸಂಘದ ವತಿಯಿಂದ ಉಚಿತ ಆರೋಗ್ಯ ಕಾರ್ಡ್ ವಿತರಿಸಲಾಗುವುದು ಹಾಗು ಬಿ.ಪಿ.ಎಲ್. ಕಾರ್ಡುದಾರರು ಉಚಿತ ಆರೋಗ್ಯ ಕಾರ್ಡ್‍ಗಾಗಿ ರೇಷನ್ ಕಾರ್ಡ್, ಪ್ರತಿ ಸದಸ್ಯನ ಆಧಾರ್ ಕಾರ್ಡಿನ ಪ್ರತಿಯನ್ನು ತರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





