ಬದಿಯಡ್ಕ: ತುಳುನಾಡಿನ ಇತಿಹಾಸ ಪ್ರಸಿದ್ಧ ಪ್ರಮುಖ ಬೂಡುಗಳಲ್ಲಿ ಒಂದಾಗಿರುವ ಕುಂಬ್ಡಾಜೆ ಗ್ರಾಮದ ಪುತ್ರಕಳ ಬೂಡಿನ ಜೀರ್ಣೋದ್ಧಾರ ಕಾರ್ಯಕ್ಕೆ ಕುಟುಂಬಸ್ಥರ ನೇತೃತ್ವದಲ್ಲಿ ಊರ ಹತ್ತು ಸಮಸ್ತರ ಸಹಭಾಗಿತ್ವದಲ್ಲಿ ನಾಡಿನ ಆಸ್ತಿಕ ಜನ ಸಜ್ಜಾಗುತ್ತಿರುವುದು ಕಂಡು ಬರುತ್ತಿದೆ.
ಇದರ ಅಂಗವಾಗಿ ಈಗಾಗಲೇ ಬಾಲಲಯ ಪ್ರತಿಷ್ಠೆ ನಡೆಸಿ ಬೂಡಿನ ಈ ಹಿಂದಿನ ಪುರಾತನ ಮನೆಯನ್ನು ಮುರಿದು ನೆಲ ಸಮ ತಟ್ಟು ಮಾಡಲಾಗಿದೆ. ಜೀರ್ಣೋದ್ಧಾರ ಸಮಿತಿ ರಚನೆಯಾಗಿದ್ದು 2020 ಎಪ್ರಿಲ್ ತಿಂಗಳಲ್ಲಿ ಶಿಲಾನ್ಯಾಸ ಕಾರ್ಯ ನಡೆಸಲು ಸಮಿತಿ ಸಭೆ ನಿರ್ಧರಿಸಿದೆ.
ಈ ಬಗ್ಗೆ ಪುತ್ರಕಳ ಬೂಡಿನ ಪರಿಸರದಲ್ಲಿ ಸೇರಿದ ಸಭೆಯಲ್ಲಿ ಬೂಡಿನ ತಂತ್ರಿ ಮನೆತನದ ಅರವಿಂದ ಅಲೆವೂರಾಯ ನೇರೆಪ್ಪಾಡಿ ಮಾರ್ಗದರ್ಶನ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವಾನಂದ ಶೆಟ್ಟಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಬೂಡಿನ ಆಡಳಿತ ಸಮಿತಿ ಅಧ್ಯಕ್ಷ ಬೈಂಕಿ ಭಂಡಾರಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಪಿ.ವೈ.ದೇರಣ್ಣ ರೈ,ಬಾಲಕೃಷ್ಣ ರೈ ಶೇಣಿ, ಹರಿಪ್ರಸಾದ್ ರೈ ಪುತ್ರಕಳ,ಸುರೇಶ್ ಕುಮಾರ್ ಕೈಲಾಸ ನಗರ ಮೊದಲಾದವರು ಮಾತನಾಡಿದರು. ಸಭೆಯಲ್ಲಿದ್ದವರು ತಮ್ಮ ತಮ್ಮ ಅಭಿಪ್ರಾಯಗಳ ಮಂಡನೆಯ ಮೂಲಕ ಸಲಹೆ ಸೂಚನೆ ನೀಡಿದರು. ಪ್ರಜ್ವಲ್ ರೈ ಸ್ವಾಗತಿಸಿ, ಕಿಶೋರ್ ಆಳ್ವ ವಂದಿಸಿದರು.





