ಬದಿಯಡ್ಕ: ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿಯ ಬದಿಯಡ್ಕ ಮಹಾಮಂಡಲ ಗೋಕುಲೋತ್ಸವವು ಜ.12ರಂದು ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನಡೆಯಲಿರುವುದು.
ಅಂದು ಬೆಳಗ್ಗೆ 8.45ಕ್ಕೆ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಶೋಭಾಯಾತ್ರೆ. 9.45ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಜ್ಜಿಮೂಲೆ ಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸುವರು. ಅಮೃತ ಬಾಲಸಂಸ್ಕøತಿಯ ರಾಜ್ಯ ಸಂಚಾಲಕ ರಾಜನ್ ಮುಳಿಯಾರು ಮುಖ್ಯ ಭಾಷಣ ಮಾಡುವರು. 10.30ರಿಂದ ಬಾಲಗೋಕುಲದ ಮಕ್ಕಳಿಗೆ ನಿರ್ಧಾರಿತ ಬೌದ್ಧಿಕ ಹಾಗೂ ಶಾರೀರಿಕ ಸ್ಪರ್ಧೆಗಳು, ಮಧ್ಯಾಹ್ನ 3ರಿಂದ ಸಾಂಸ್ಕøತಿಕ ವೈವಿಧ್ಯ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ ಅಧ್ಯಕ್ಷತೆಯಲ್ಲಿ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.




