ಉಪ್ಪಳ: ಚಿಪ್ಪಾರು ಜನಶಕ್ತಿ ಪ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ "ಸಂವಿಧಾನ ಸಂರಕ್ಷಣೆ" ವಿಚಾರ ಸಂಕಿರಣ ಮತ್ತು "ಹೊಸ ವರ್ಷಾಚರಣೆ 2020" ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ ವಿಚಾರ ಸಂಕಿರಣದಲ್ಲಿ ವಿಷಯಮಂಡನೆ ನಡೆಸಿದರು. ಕೃಷ್ಣ ಶೆಟ್ಟಿಗಾರ್ ಮಾಸ್ತರ್ ಚಿಪ್ಪಾರು ಹೊಸ ವರ್ಷಾಚರಣೆ ಸಮಾರಂಭವನ್ನು ಉದ್ಘಾಟಿಸಿದರು. ಗ್ರಂಥಾಲಯದ ಅಧ್ಯಕ್ಷ ಜಯಂತ ಚಿಪ್ಪಾರು ಅಧ್ಯಕ್ಷತೆ ವಹಿಸಿದರು. ರಾಧಾಕೃಷ್ಣ ಶೆಟ್ಟಿ ನಡುವಳಚ್ಚಿಲು, ಅಬ್ದುಲ್ ರಝಾಕ್ ಚಿಪ್ಪಾರು, ಪುರಂದರ ಶೆಟ್ಟಿಗಾರ್ ಚಿಪ್ಪಾರು, ರಾಜೇಶ್ ಚಿಪ್ಪಾರು ಪೆರ್ಲ, ರಫೀಕ್, ಅಭಿ ಚಿಪ್ಪಾರು ಉಪಸ್ಥಿತರಿದ್ದು ಶುಭ ಹಾರೈಸಿದರು. ಖಲೀಲ್ ನಾರ್ಣಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಿಕ ಜಯಲಕ್ಷ್ಮಿ ವಂದಿಸಿದರು.





