ಪೆರ್ಲ: ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ 31ನೇ ವಾರ್ಷಿಕೋತ್ಸವದ ಅಂಗವಾಗಿ ಹೊನಲುಬೆಳಕಿನ 60ಕೆ.ಜಿ ವಿಭಾಗ ಪುರುಷರ ಕಬಡ್ಡಿ ಪಂದ್ಯಾಟ ಮತ್ತು ಸನ್ಮಾನ ಸಮಾರಂಭ ಜನವರಿ 18ರಂದು ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ಜರುಗಲಿದೆ.
ರಾತ್ರಿ 8ಗಮಟೆಗೆ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಎಂ.ವಿಷ್ಣು ನಾವಡ ದೀಪ ಪ್ರಜ್ವಲನೆ ನಡೆಸುವರು. ಕ್ಲಬ್ ಗೌರವಾಧ್ಯಕ್ಷ, ಸಿ.ಬಿ.ಐ ಬೆಂಗಳೂರು ಘಟಕ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಅಧ್ಯಕ್ಷತೆ ವಹಿಸುವರು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯ ಉದಯ ಚೆಟ್ಟಿಯಾರ್ ಶುಭಾಶಂಸನೆಗೈಯುವರು.
ಈ ಸಂದರ್ಭ ಕಬಡ್ಡಿ ಆಟಗಾರ, ಹಿರಿಯ ದೈವನರ್ತನ ಕಲಾವಿದ ಮೋಹನ ಬಜಕೂಡ್ಲು ಮತ್ತು ಯಕ್ಷಗಾನ ಕಲಾವಿದ ಶಿವಾನಂದ ಶೆಟ್ಟಿ ಬಜಕೂಡ್ಲು ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 10ರಿಂದ 60ಕೆ.ಜಿ ವಿಭಾಗ ಕಬಡ್ಡಿ ಪಂದ್ಯಾಟ ನಡೆಯುವುದು. ವಿಜೇತ ತಂಡಗಳಿಗೆ ನಗದು ಸಹಿತ ಶಾಶ್ವತ ಫಲಕ ಬಹುಮಾನವಾಗಿ ನೀಡಲಾಗುವುದು.



