ಕಾಸರಗೋಡು: ಕೃಷ್ಣೈಕ್ಯಗೊಂಡ ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಸ್ಮøತಿ ಆರಾಧನಾ ಸಮಾರಂಭ ಕಾಞಂಗಾಡಿನಲ್ಲಿ ಜರುಗಿತು. ಇಲ್ಲಿನ ಶಿವಳ್ಳಿ ಬ್ರಾಹ್ಮಣ ಸಭಾ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ವಿಷ್ಣುಪೂಜೆ, ಶಿವಳ್ಳಿ ಬ್ರಾಹ್ಮಣ ಸಭಾ ಮಹಿಳಾ ಸಮಾಜ ವತಿಯಿಂದ ಭಜನೆ ನಡೆಯಿತು. ನಂತರ ಎಲ್ಲ ಭಕ್ತಾದಿಗಳಿಂದ ಶ್ರೀ ವಿಷ್ಣು ಸಹಸ್ರನಾಮಾರ್ಚನೆ ನಡೆಯಿತು.
ವೇಣುಗೋಪಾಲ ಕಲ್ಲೂರಾಯ ಅವರು ಪಾದಪೂಜೆ ನಡೆಸುವ ಮೂಲಕ ಸ್ವಾಮೀಜಿ ಅವರ ಸಂಸ್ಮರಣೆ ನಡೆಸಿಕೊಟ್ಟರು. ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಹಾಗೂ ಏರಿಯಾ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಘಟಕ ಅಧ್ಯಕ್ಷ ಪ್ರೇಮ ಬಾರಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ವಕೀಲ ಕೆ.ಶ್ರೀಕಾಂತ್, ಜಿಲ್ಲಾ ಕಾರ್ಯದರ್ಶಿ ಟಿ.ಕೆ ಮಂಜುನಾಥ್, ಏರಿಯಾ ಕಾರ್ಯದರ್ಶಿ ಶ್ರೀನಿವಾಸ್, ಸುನಿತಾ ವೈ ಪಾಂಡಿತ್ತಾಯ, ವಿಠಲ ದಾಸ್ ಮುಂತಾದವರು ಉಪಸ್ಥಿತರಿದ್ದರು.




