ಕುಂಬಳೆ: ಕಾಸರಗೋಡಿನ ಪ್ರಸ್ತುತ ಕನ್ನಡದ ಸ್ಥಿತಿಗತಿಗಳ ಬಗ್ಗೆ ಎಲ್ಲರೂ ತಿಳಿದದ್ದೆ. ಒಂದು ಕಾಲದಲ್ಲಿ ಕನ್ನಡ ಭಾಷೆ, ಸಂಸ್ಕøತಿಯು ಮೆರೆಯುತ್ತಿದ್ದ ಕಾಸರಗೋಡಿನಲ್ಲಿ ಮತ್ತೊಮ್ಮೆ ಕನ್ನಡದ ಶ್ರೀಮಂತ ಸಂಸ್ಕøತಿಯನ್ನು ಮರುಕಳಿಸುವ ಅಗತ್ಯವಿದೆ. ಈ ದೃಷ್ಟಿಯಿಂದ ಏಪ್ರಿಲ್ 10, 11 ಮತ್ತು 12 ರಂದು ಸರೋವರ ದೇವಸ್ಥಾನ ಅನಂತಪುರ ಶ್ರೀ ಪದ್ಮನಾಭ ದೇವಸ್ಥಾನ ಪರಿಸರದಲ್ಲಿ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನ ಎಂಬ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಸಮ್ಮೇಳನದ ಯಶಸ್ಸಿಗಾಗಿ ವಿಪುಲವಾದ ಸ್ವಾಗತ ಸಮಿತಿ ರೂಪೀಕರಿಸುವ ಅಗತ್ಯವಿದೆ. ಈ ಬಗ್ಗೆ ಜ.19 ರಂದು ಭಾನುವಾರ ಬೆಳಗ್ಗೆ 10 ಕ್ಕೆ ಕುಂಬಳೆ ಸಿಂಡಿಕೇಟ್ ಬ್ಯಾಂಕ್‍ನ ಮಹಡಿಯ ಮಾಧವ ಪೈ ಹಾಲ್‍ನಲ್ಲಿ ಬೃಹತ್ ಸಮಾಲೋಚನಾ ಸಭೆ ಕರೆಯಲಾಗಿದೆ. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗಿದೆ.



