ಬದಿಯಡ್ಕ: ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ಬದಿಯಡ್ಕ ಶಾಖೆಯ ವಾರ್ಷಿಕೋತ್ಸವ `ನೃತ್ಯೋತ್ಸವ 2020' ಜ.25ರಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ವೈವಿಧ್ಯತೆಯೊಂದಿಗೆ ನಡೆಯಲಿದೆ.
ಸಂಜೆ 6 ಗಂಟೆಯಿಂದ ಪ್ರಾರಂಭವಾಗಲಿರುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯರಾದ ವಿದುಷಿ ಸಾವಿತ್ರಿ ಕೆ.ಭಟ್ ದೊಡ್ಡಮಾಣಿ ಅವರಿಗೆ ಮೊದಲ ಆಮಂತ್ರಣ ನೀಡುವ ಮೂಲಕ ಭಾನುವಾರ ಬಿಡುಗಡೆಗೊಳಿಸಲಾಯಿತು. ವೈಷ್ಣವೀ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು, ಮಹೇಶ್ ವಳಕ್ಕುಂಜ, ಭಾಸ್ಕರ ಬದಿಯಡ್ಕ, ಸವಿತಾ ಕೊರೆಕ್ಕಾನ ಪಾಲ್ಗೊಂಡಿದ್ದರು.





