HEALTH TIPS

204 ಯೋಜನೆಗಳು ಪೂರ್ಣ: ಜಿಲ್ಲಾಧಿಕಾರಿ

     
     ಕಾಸರಗೋಡು: ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 2013ರಿಂದ 2019 ವರೆಗೆ 204 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
     ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇವುಗಳಲ್ಲಿ 103 ಯೋಜನೆಗಳು 2019ರಲ್ಲಿ ಪೂರ್ಣಗೊಂಡಿವೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಪುರ್ ನಿವಾಸ ಗ್ರಾಮದ ನಿರ್ಮಾಣ ಫೆ.1ರಿಂದ ಆರಂಭಗೊಳ್ಳಳಿದೆ. ಈ ಮೂಲಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿರುವ ಎಲ್ಲ ಯೋಜನೆಗಳನ್ನೂ ಜಾರಿಗೊಳಿಸಲಾಗುವುದು. ಫೆ.1ರಂದು ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಚಟುವಟಿಕೆ ಆರಂಭಿಸಲಿದೆ ಎಂದು ಜಿಲ್ಲಾಧಿಆರಿ ತಿಳಿಸಿದರು.
     2017 ರ ನಂತರ 23 ಸಾವಿರ ಕಡತಗಳಿಗೆ ತೀರ್ಪು ಒದಗಿಸವ ಕಮದಯ ಇಲಾಖೆ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು. 4718 ಕಡತಗಳು ಮಾತ್ರ ಕಂದಾಯ ಇಲಾಖೆಯಲ್ಲಿ ಉಳಿದುಕೊಂಡಿವೆ.
     ಜಿಲ್ಲೆಯಲ್ಲಿ ತೀವ್ರವಾಗಿ ತಲೆದೋರುತ್ತಿರು ಕುಡಿಯುವನೀರಿನ ಬರ ಎದುರಿಸುವ ನಿಟ್ಟಿನಲ್ಲಿ 2400 ತಡೆಗೋಡೆಗಳ ನಿರ್ಮಾಣ ಸಂಬಧ ತಡೆಗೋಡೆ ಉತ್ಸವ ಚಟುವಟಿಕೆಗಳು ಸಕ್ರಿಯವಾಗಿವೆ. ಝೀರೋ ವೇಸ್ಟ್ ಕಾಸರಗೋಡಿನಲ್ಲಿ ಶೀಘ್ರವೇ ಜಾರಿಗೆ ಬರಲಿದೆ.ಹೈರಾಲಿಸಿಸ್ ತಾಂತ್ರಕತೆ ಬಳಸಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೆರಿಯ ಏರ್ ಸ್ಟ್ರಿಪ್ ಗೆ ಕೇಂದ್ರ ಸರಕಾರದ ಅನುಮತಿ ಲಭಿಸಿದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
        ಕಿಫ್ ಬಿ ಅಂಗವಾಗಿ ಮೂಲಭೂತ ಸೌಲರ್ಭಯ ಅಭಿವೃದ್ಧಿ ಪ್ರದರ್ಶನ ಮತ್ತು ಜನಜಾಗೃತಿ ಕಾರ್ಯಕ್ರಮಗಳು ಜ.28,29,30ರಂದು ಕಾಸರಗೋಡಿನಲ್ಲಿ ನಡೆಯಲಿವೆ. ಕೇರಳನಿರ್ಮಿತಿ ಎಂಬ ಈ ಕಾರ್ಯಕ್ರಮಗಳನ್ನು 28ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. 27ರಂದು ಭೂಹಕ್ಕು ಪತ್ರ ಮೇಳ ನಡೆಯಲಿದ್ದು, 2 ಸಾವಿರ ಭೂಹಕ್ಕು ಪತ್ರಗಳನ್ನು ವಿತರಿಸಲಾಗುವುದು. 1802 ಭೂಹಕ್ಕು ಪತ್ರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈ ಮೇಳವನ್ನು ಕಂದಾಯಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries