ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರಾವಳಿ ಲೇಖಕಿ ಹಾಗು ವಾಚಕರ ಸಂಘದ ಜಂಟಿ ಆಶ್ರಯದಲ್ಲಿ ಜನವರಿ 24 ರಂದು 'ದಶಕದ ಮಹಿಳಾ ಆತ್ಮಕಥನಗಳು' ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಚಾಲದಲ್ಲಿರುವ ಕಣ್ಣೂರು ವಿವಿ ಕ್ಯಾಂಪಸ್ ಕನ್ನಡ ವಿಭಾಗ ಸಭಾಂಗಣದಲ್ಲಿ ಜರಗಲಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ರಾದ ಡಾ ವಿಜಯಮ್ಮ ಉದ್ಘಾಟಿಸುವರು. ಮಹಿಳಾ ಆತ್ಮಕತೆಗಳಿಗೆ ಸಂಬಂಧಿಸಿದಂತೆ ವಿಚಾರ ಮಂಡನೆ ಹಾಗೂ ಚರ್ಚೆ ನಡೆಯಲಿದೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಸಚಿವ ಡಾ.ಎ. ಸುಬ್ಬಣ್ಣ ರೈ ಸಮಾರೋಪ ಭಾಷಣಗೈಯ್ಯುವರು. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಪಾಲ್ಗೊಳ್ಳಬಹುದೆಂದು ಕಣ್ಣೂರು ವಿಶ್ವವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





