ಪೆರ್ಲ: ಬಿಜೆಪಿ ಸದಸ್ಯರಿಗೆ ಸಭೆಯ ನೋಟೀಸು ನೀಡದೆ ಆಡಳಿತ ಸಮಿತಿಯ ಸಭೆಯನ್ನು ನಡೆಸುವ ಪ್ರಯತ್ನವನ್ನು ಸದಸ್ಯರಾದ ಸತೀಶ್ ಕುಲಾಲ್ ಹಾಗೂ ಪುಟ್ಟಪ್ಪ ಖಂಡಿಗೆ ಇವರು ಕಾರ್ಯದರ್ಶಿಯವರಿಗೆ ದೂರು ನೀಡುವ ಮುಖಾಂತರ ರದ್ದುಗೊಳಿಸಿದರು. ಸದಸ್ಯರಾದ ರೂಪವಾಣಿ ಆರ್ ಭಟ್, ಉದಯ ಚೆಟ್ಟಿಯಾರ್, ಮಮತಾ ರೈ, ಮಲ್ಲಿಕಾ ರೈ, ಶಶಿಕಲಾ ಇವರಿಗೆ ಶನಿವಾರ ನಡೆಸಲು ನಿಶ್ಚಯಿಸಿದ್ದ ತುರ್ತು ಸಭೆಯ ನೋಟೀಸು ನೀಡದೆ ಸಭೆ ನಡೆಸುವ ಪ್ರಯತ್ನವನ್ನು ಪಂಚಾಯತಿ ಅಧ್ಯಕ್ಷರು ನಡೆಸಿದಾಗ ಇದನ್ನು ವಿರೋಧಿಸಿ ದೂರು ನೀಡಲಾಯಿತು. ಗ್ರಾಮ ಪಂಚಾಯತಿ ಆಡಳಿತ ಪಕ್ಷದವರು ನಿರಂತರವಾಗಿ ಪಂಚಾಯತಿ ರಾಜ್ ನಿಯಮವನ್ನು ಉಲ್ಲಂಘಿಸಿ ಸಭೆ ನಡೆಸುತ್ತಿದ್ದು, ಇದನ್ನು ಒಪ್ಪಿಕೊಂಡು ಕಾರ್ಯದರ್ಶಿಯವರು ಸಭೆಯನ್ನು ರದ್ದುಗೊಳಿಸಿದರು. ಇನ್ನಾದರೂ ಮುಂದಿನ ದಿನಗಳಲ್ಲಿ ಗ್ರಾ.ಪಂ.ಸಾಮಾನ್ಯ ನಡವಳಿಕೆಗಳಿಗೆ ಅನುಸಾರ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಅಧ್ಯಕ್ಷರು ಆಡಳಿತ ನಡೆಸಬೇಕೆಂದು ಬಿಜೆಪಿ ಸದಸ್ಯರು ವಿನಂತಿಸಿದರು.
ಎಣ್ಮಕಜೆ ಪಂಚಾಯತ್ ಆಡಳಿತ ಸಮಿತಿ ಸಭೆ ರದ್ದು
0
ಜನವರಿ 12, 2020