ಕಾಸರಗೋಡು: ಪ್ಲಾಸ್ಟಿಕ್ ಪೆನ್‍ಗಳ ಬಳಕೆ ಕಡಿತಗೊಳಿಸುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆಗೊಳಿಸುವ, ಪ್ಲಾಸ್ಟಿಕ್ ಪೆನ್‍ಗಳ ಮರುಬಳಕೆ ಮೂಲಕ ಪ್ರಕೃತಿ ಸಂರಕ್ಷಣೆ ನಡೆಸುವ ಉದ್ದೇಶದೊಂದಿಗೆ ಹರಿತ ಕೇರಳಂ ಮಿಷನ್ ಜಿಲ್ಲೆಯಲ್ಲಿ ಆರಂಭಿಸಿರುವ ಪೆನ್‍ಫ್ರೆಂಡ್ ಯೋಜನೆಯಲ್ಲಿ ರಾಜಪುರಂ ಸಂತ ಪಯಾಸ್ ಟೆಂತ್ ಕಾಲೇಜಿನಲ್ಲಿ 24 ಕಿಲೋ ಪೆನ್‍ಗಳ ಸಂಗ್ರಹವಾಗಿದೆ.
ಕಾಲೇಜಿನ ಭೂಮಿತ್ರ ಸೇನೆ, ಎನ್.ಎಸ್.ಎಸ್.ಘಟಕಗಳ ಸಹಕಾರದಿಂದಿಗೆ ಈ ಯೋಜನೆ ಜಾರಿಗೊಂಡಿದೆ. ಈ ಸಂಬಂಧ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರಿಗೆ ಪೆನ್‍ಗಳ ಸಂಗ್ರಹವನ್ನು ಹಸ್ತಾಂತರಿಸಲಾಯಿತು. ಹರಿತ ಕೇರಳಂ ಜಿಲ್ಲಾ ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹೊಸದುರ್ಗ ತಹಸೀಲ್ದಾರ್ ಮಣಿರಾಜ್, ಎನ್.ಎಸ್.ಎಸ್. ಘಟಕ ಸಂಚಾಲಕ ಡಾ.ಎನ್.ವಿ. ವಿನೋದ್, ಭೂಮಿತ್ರ ಸೇನೆ ಸಂಚಾಲಕಿ ಪಾರ್ವತಿ ಮೊದಲಾದವರು ನೇತೃತ್ವ ವಹಿಸಿದ್ದರು.



