ಕಾಸರಗೋಡು: ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ವಾರ್ಷಿಕೋತ್ಸವ ಹಾಗು ಶ್ರೀ ವಿಷ್ಣುಮೂರ್ತಿ ಒತ್ತೆಕೋಲದ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಟ್ರಸ್ಟ್ ಬೋರ್ಡ್‍ನ ಅಧ್ಯಕ್ಷ ಮಹಾಬಲ ನಾೈಕ್ ಸೂರ್ಲು, ಸದಸ್ಯರಾದ ಸುರೇಶ್, ಸತೀಶ್ ಆಳ್ವ ಹಾಗು ಒತ್ತೆಕೋಲ ಸಮಿತಿಯ ಅಧ್ಯಕ್ಷ ಕೆ.ಟಿ.ಸುಬ್ರಹ್ಮಣ್ಯ, ಕಾರ್ಯದರ್ಶಿ ಗಣೇಶ್ ಹಾಗು ದೇವಸ್ಥಾನದ ಪಾರಂಪರ್ಯ ಮೊಕ್ತೇಸರರಾದ ಸುಧಾಕರ ಕೋಟೆಕುಂಜತ್ತಾಯ, ಸದಸ್ಯರಾದ ಕೆ.ಜಯಶೀಲ ಸುವರ್ಣ, ಉದಯ ನಾಯ್ಕ್, ಅಜಿತ್, ಪ್ರಸಾದ್, ಚಂದ್ರ, ಸುಕುಮಾರ, ನವೀನ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯೊಂದಿಗೆ ಅರ್ಚಕರಾದ ಪದ್ಮನಾಭ ಮನೋಳಿತ್ತಾಯ ಶುಭಹಾರೈಸಿದರು.




