ಕುಂಬಳೆ: ನಾಗರ8ಇಕ ಪ್ರಪಂಚದಲ್ಲಿ ಸನ್ಮಾರ್ಗದ ವೃತಿ ನಿರ್ವಹಣೆ ಪ್ರತಿಯೊಬ್ಬನ ಕರ್ತವ್ಯವೂ ಹೌದು. ಕುಟುಂಬ ನಿರ್ವಹಣೆಯ ಜವಾಬ್ದಾರಿಗಳನ್ನು ಹೆಗಲಿಗೇರಿಸಿ ದುಡಿದು ಬಸವಳಿದ ಮನುಷ್ಯ ವೃತ್ತಿಯಿಂದ ನಿವೃತ್ತರಾದ ಬಳಿಕ ಕನಿಷ್ಠ ಅಗತ್ಯಗಳಿಗೂ ದಣಿವರಿಯದೆ ಹೋರಾಡಬೇಕಾದ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಬೇಡಿಕೆಯಿರಿಸುವುದರ ಜೊತೆಗೆ ಪರಸ್ಪರ ಜನಸಂಪರ್ಕ ಬೆಳೆಸಿ ಬೇಗುದಿಗಳಿಂದ ಪಾರಾಗಲು ಸಂಘಟನೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಬೇಕು ಎಂದು ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಪಿ.ಕುಞÂ್ಞಂಬು ನಾಯರ್ ಅವರು ಕರೆನೀಡಿದರು.
ಕೇರಳ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟದ ಕುಂಬಳೆ ಘಟಕದ ಆಶ್ರಯದಲ್ಲಿ ಶನಿವಾರ ನಾರಾಯಣಮಂಗಲ ಶ್ರೀಗಣೇಶ ಮಂದಿರದಲ್ಲಿ ಆಯೋಜಿಸಲಾದ ಕುಟುಂಬಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತಿಯ ಬಳಿಕವೂ ಪ್ರವೃತ್ತರಾಗಿರುವುದು ಜೀವನೋತ್ಸಾಹವನ್ನು ವೃದ್ದಿಗೊಳಿಸುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ದಿಗಳಾಗಿರುವುದು ನಿಜವಾದರೂ ದಶಕಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದು ಬಳಿಕ ಲಭ್ಯವಾಗಬೇಕಾದ ಕನಿಷ್ಠ ಸೌಕರ್ಯಗಳಿಂದ ವಂಚಿತರಾಗುವ ಪ್ರಸಂಗ ದಿನನಿತ್ಯ ಹೆಚ್ಚುತ್ತಿದೆ. ಕಾಲಾಕಾಲಕ್ಕೆ ಬದಲಾಗುವ ಕಾನೂನು-ಕಟ್ಟಳೆಗಳನ್ನು ಅಭ್ಯಸಿಸಿ ನ್ಯಾಯದೊರಕಿಸುವಲ್ಲಿ ಸಂಘಟನೆಗಳ ಮೂಲಕ ಒತ್ತು ನೀಡಲಾಗುತ್ತದೆ. ಜೊತೆಗೆ ಮನೋಸಾಮಥ್ರ್ಯವನ್ನು ಕಾಯ್ದುಕೊಳ್ಳುವಲ್ಲೂ ಸಂಘಟನೆಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಯತ್ನಿಸಬೇಕಾಗಿದೆ ಎಮದು ಅವರು ಈ ಸಂದರ್ಭ ತಿಳಿಸಿದರು.
ಸೇವಾ ಪಿಂಚಣಿದಾರರ ಒಕ್ಕೂಟದ ಕುಂಬಳೆ ಘಟಕದ ಅಧ್ಯಕ್ಷ ಎ.ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಅಧ್ಯಕ್ಷ ಡಿ.ರಾಮಕೃಷ್ಣ ಭಟ್, ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಯು.ರವಿಚಂದ್ರ, ಕಾಸರಗೋಡು ಬ್ಲಾಕ್ ಕಾರ್ಯದರ್ಶಿ ಕೆ.ಮೋಹನ್, ಉಸ್ತುವಾರಿ ಸದಸ್ಯ ಡಿ.ಕೃಷ್ಣ ಭಟ್ ಉಪಸ್ಥಿತರಿದ್ದು ಶುಭಾಶಂಸನೆಗೈದರು.
ಸಮಾರಂಭದಲ್ಲಿ ರಾಜ್ಯ ಸೇವಾ ಪಿಂಚಣಿದಾರರ ಒಕ್ಕೂಟದ ಕುಂಬಳೆ ಘಟಕದ ನೂತನ ನಾಮಫಲಕವನ್ನು ಸಂಗಟನೆಯ ಕಾಸರಗೋಡು ಬ್ಲಾಕ್ ಅಧ್ಯಕ್ಷ ಡಿ.ರಾಮಕೃಷ್ಣ ಭಟ್ ಅನಾವರಣಗೊಳಿಸಿದರು. ಜೊತೆಗೆ ಘಟಕದ ಸಕ್ರಿಯ ಸದಸ್ಯ, ಹಿರಿಯ ಪಿಂಚಣಿದಾರ ಎನ್.ಉಗ್ಗಪ್ಪ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರದ್ದಾ ನಾಯರ್ಪಳ್ಳ ಅವರಿಂದ ಗಮಕ ವಾಚನ ಸಹಿತ ಪುಟಾಣಿಗಳಿಂದ, ವಿದ್ಯಾರ್ಥಿಗಳಿಂದ ವಿವಿಧ ಕಲಾ ಪ್ರದರ್ಶನಗಳು ನಡೆಯಿತು. ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಮಿಮಿಕ್ರಿ ಪ್ರದರ್ಶನ ನೀಡಿದರು. ಎನ್.ಉಗ್ಗಪ್ಪ ಶೆಟ್ಟಿ ಸ್ವಾಗತಿಸಿ, ರಾಜೇಶ್ವರಿ ಟೀಚರ್ ವಂದಿಸಿದರು. ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು. ಕುಟುಂಬಮೇಳದಲ್ಲಿ 70ಕ್ಕಿಂತಲೂ ಮಿಕ್ಕಿದ ಸೇವಾ ಪಿಂಚಣಿದಾರರು, ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.




