ಮಂಜೇಶ್ವರ: ಪೌರತ್ವ ಕಾಯ್ದೆಯ ವಿಚಾರದಲ್ಲಿ ಮುಸ್ಲಿಂ ಜನತೆಯನ್ನು ತಪ್ಪುದಾರಿಗೆಳೆದು ಪ್ರತಿ ಶುಕ್ರವಾರಗಳಲ್ಲಿ ರಸ್ತೆ ತಡೆ ಮಾಡಿ ಅನುಮತಿ ರಹಿತ ಮೆರವಣಿಗೆ, ಪ್ರತಿಭಟನೆ ಹೆಸರಲ್ಲಿ ಹೆದ್ದಾರಿ ತಡೆ, ವ್ಯಾಪಾರಿಗಳ ವ್ಯಾಪಾರಕ್ಕೆ, ಅಂಗಡಿಗಳಿಗೆ ಒತ್ತಡ ಹೇರಿ ಬಂದ್ ಮಾಡಿಸುವಿಕೆ, ವಾಹನಗಳಿಗೆ ತಡೆ, ಕಲ್ಲುತೂರಾಟ, ಪ್ರತಿಭಟನೆಗಳಿಗೆ ಶಾಲಾ ಮಕ್ಕಳ ಬಳಕೆ, ಇಂತಹ ಕೃತ್ಯಗಳನ್ನು ಸಿಎಎ ಕಾಯ್ದೆ ವಿರುದ್ದದ ಹೆಸರಲ್ಲಿ ಮತೀಯವಾದಿಗಳು ನಿತ್ಯ ನಡೆಸುತ್ತಿದ್ದರೂ ಪೆÇಲೀಸ್ ಇಲಾಖೆ ಕಣ್ಣು ಮುಚ್ಚಿ, ಮುಸ್ಲಿಂ ಲೀಗ್ ನ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಗಂಭೀರ ಆರೋಪ ಮಾಡಿದೆ.
ಶುಕ್ರವಾಗಳಲ್ಲಿ ಮುಸ್ಲಿಂ ಜನತೆಯನ್ನು ಪ್ರೇರೇಪಿಸಿ ರಸ್ತೆಗಿಳಿಸಿ ಮುಸ್ಲಿಂ ಲೀಗ್, ಕಾಂಗ್ರೆಸ್, ಹಾಗೂ ಎಡರಂಗದ ನೇತಾರರು ಫೆÇೀಟೋ ಕ್ಲಿಕ್ಕಿಸುವುದೇ ಈಗ ಎಡರಂಗ ಹಾಗೂ ಐಕ್ಯರಂಗ ನೇತಾರರು ಕಾಯಕ ಎಂದು ಬಿಜೆಪಿ ನಕಲಿ ಹೋರಾಟವನ್ನು ಲೇವಡಿ ಮಾಡಿದೆ. ಲೋಕಸಭೆ,ರಾಜ್ಯಸಭೆಗಳಲ್ಲಿ ಬಹುಮತದಿಂದ ಜಾರಿಯಾದ ಕಾಯ್ದೆಗೆ ರಾಷ್ಟ್ರಪತಿ ಗಳ ಅಂಕಿತವಾದ ಬಳಿಕ ವಿರೋಧ ವ್ಯಕ್ತಪಡುಸುವುದು ಕೈಲಾಗದವರು ಮೈ ಪರಚಿದಂತೆ. ಲೋಕಸಭೆಯಲ್ಲಿ ಕಾಯ್ದೆ ಜಾರಿಯಾದಾಗ ತುಟಿ ಬಿಚ್ಚದ ಕಾಸರಗೋಡು ಸಂಸದರು ಈಗ ರಸ್ತೆತಡೆ ಮಾಡುವ ಕಿಡಿಗೇಡಿಗಳನ್ನು ಉದ್ದೇಶಿಸಿ ಭಾಷಣ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಬಿಜೆಪಿ ಪ್ರಶ್ನಿಸಿದೆ?
ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಜತೂರಿನಿಂದ ಹೊಸಂಗಡಿ ವರೆಗೆ ರಸ್ತೆ ತಡೆ ಸೃಷ್ಟಿಸಿದ ಇಲ್ಲಿನ ಎಡರಂಗ ಹಾಗೂ ಮುಸ್ಲಿಂಲಿಗ್, ಕಾಂಗ್ರೆಸ್ ನೇತಾರರುಗಳ ಮೇಲೆ ಪೆÇಲೀಸರು ಕೇಸ್ ದಾಖಲಿಸುತ್ತಿಲ್ಲ. ಪೋಲೀಸರು ಪ್ರತಿಭಟನಾ ನಿರತರ ಜೊತೆ ಸೇರಿ ನಾಡಿನ ಜನತೆಯನ್ನು ವಂಚಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಪ್ರತಿಭಟನೆಯ ಹೆಸರಲ್ಲಿ ಸಾರ್ವಜನಿಕ ತೊಂದರೆಯಾದವರ ಮೇಲೆ ಕೇಸು ದಾಖಲಿಸದೆ,ನಾಮಮಾತ್ರ ಮೊಕದ್ದಮೆಯನ್ನು ದಾಖಲಿಸಿ ಕಾನೂನು ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ಮಂಡಲ ಸಮಿತಿ ಸಭೆಯಲ್ಲಿ ಆರೋಪಿಸಲಾಗಿದೆ.
ಮಂಡಲಾಧ್ಯಕ್ಷ ಮಣಿಕಂಠ ರೈ ಪಟ್ಲ, ಮುಖಂಡರಾದ ವಿಜಯ್ ರೈ, ಆದರ್ಶ್ ಬಿ.ಎಂ, ಪದ್ಮನಾಭ ಕಡಪ್ಪರ, ಹರಿಶ್ಚಂದ್ರ ಎಂ, ಪದ್ಮನಾಭ ಬಾಡೂರು, ದಿನೇಶ್ ಚೆರುಗೊಳಿ, ಚಂದ್ರಕಾಂತ್ ಶೆಟ್ಟಿ ಮೊದಲಾದವರು ಮಂಡಲ ಸಮಿತಿ ತುರ್ತು ಸಭೆಯಲ್ಲಿ ಉಪಸ್ಥಿತರಿದ್ದರು.



