ಕುಂಬಳೆ: ಕುಂಬಳೆ ಸರ್ಕಾರಿ ಹಿರಿಯ ಬುನಾದಿ ಶಾಲೆಯಲ್ಲಿ ಭಾನುವಾರ ನಡೆದ ರಾಜ್ಯ ಲೈಬ್ರರಿ ಕೌನ್ಸಿಲ್ ವಜ್ರಮಹೋತ್ಸವದ ಮಂಜೇಶ್ವರ ತಾಲೂಕು ಮಟ್ಟದ ಕಾರ್ಯಕ್ರಮದ ವೇದಿಕೆಯಲ್ಲಿ ಕೇರಳ ಖಾದಿ ಬೋರ್ಡ್ ಸಹಯೋಗದೊಂದಿಗೆ ತಾಲೂಕು ಮಟ್ಟದ ಹಿರಿಯ ಗ್ರಂಥಾಲಯ ಕಾರ್ಯಕರ್ತರನ್ನು ಖಾದಿ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕೊಡ್ಲಮೊಗರು ಮಿತ್ರವೃಂದ ಗ್ರಂಥಾಲಯವನ್ನು ಪ್ರತಿನಿಧಿ ಕಿಟ್ಟಣ್ಣ ಶೆಟ್ಟಿ ಮಾಸ್ತರ್, ಕುಂಬಳೆ ಇ.ಎಂ.ಎಸ್.ಗ್ರಂಥಾಲಯದ ಪ್ರತಿನಿಧಿ ನಾರಾಯಣ ಗಟ್ಟಿ ಮಾಸ್ತರ್ ಹಾಗೂ ಪೈವಳಿಕೆಯ ಮೇಜರ್ ಯೂತ್ ಕ್ಲಬ್ ಗ್ರಂಥಾಲಯದ ಪ್ರತಿನಿಧಿ ಶ್ರೀನಿವಾಸ ಭಂಡಾರಿ ಅವರನ್ನು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಹಾಗೂ ಸಾಹಿತಿ ಪಿ.ವಿ.ಕೆ.ಪನೆಯಾಲ್ ಗೌರವಾರ್ಪಣೆ ಸಲ್ಲಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಯು.ಶಾಮ ಭಟ್, ಆಯಿಷಾ ಎ.ಎ.ಪೆರ್ಲ, ಮಲಾರ್ ಜಯರಾಮ ರೈ, ಎ.ಕೆ.ಶಶಿಧರನ್, ರಾಧಾಕೃಷ್ಣ ಪೆರುಂಬಳ, ಡಿ.ಕಮಲಾಕ್ಷ, ದಾಸಪ್ಪ ಶೆಟ್ಟಿ ಮಾಸ್ತರ್, ಎ.ಬಿ.ರಾಧಾಕೃಷ್ಣ ಬಲ್ಲಾಳ್, ರಾಮಚಂದ್ರ ಭಟ್ ಧರ್ಮತ್ತಡ್ಕ, ಉದಯ ಸಾರಂಗ್, ಮೊಹಮ್ಮದ್ ಇಕ್ಬಾಲ್, ವನಿತಾ ಆರ್.ಶೆಟ್ಟಿ, ಶ್ರೀಕುಮಾರಿ, ಉಮೇಶ ಅಟ್ಟೆಗೋಳಿ, ನ್ಯಾಯವಾದಿ ಉದಯಕುಮಾರ್ ಉಪಸ್ಥಿತರಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಪಿ.ಕೆ.ಸ್ವಾಗತಿಸಿ, ಜಯಂತ ಎಂ.ವಂದಿಸಿದರು.





