ಕಾಸರಗೋಡು: ಕಾಸರಗೋಡು ತಾಲೂಕು ಅಭಿವೃದ್ಧಿ ಸಮಿತಿ ಸಭೆ ಜರುಗಿತು. ದೇಲಂಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಎ.ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಜ.27ರಂದು ಭೂಹಕ್ಕು ಪತ್ರ ವಿತರಣೆ ನಡೆಸಲಗಿದ್ದು, ಅಂದು 200 ಪ್ರಕರಣಗಳಲ್ಲಿ ಭೂಹಕ್ಕು ಪತ್ರ ವಿತರಣೆ ನಡೆಸಲು ನಿರ್ಧರಿಸಿರುವುದಾಗಿ ತಹಸೀಲ್ದಾರ್ ಸಭೆಯಲ್ಲಿ ತಿಳಿಸಿದರು. ಕಾಸರಗೋಡು ಮಾರುಕಟ್ಟೆಯ ಹಾದಿಬದಿ ವ್ಯಾಪಾರವನ್ನೂ ಪೂರ್ಣರೂಪದಲ್ಲಿ ನಿಲುಗಡೆ ನಡೆಸಲು, ಮೀನುಮಾರುಕಟ್ಟೆಯಲ್ಲೇ ಈ ವ್ಯಾಪಾರ ನಡೆಸುವಂತೆ, ಕಾಸರಗೋಡು ನಗರ ವ್ಯಾಪ್ತಿಯ ಹಾದಿಬದಿ ವ್ಯಾಪಾರಿಗಳಿಗೆ ಪುನರ್ ವಸತಿ ಒದಗಿಸುವ ನಿಟ್ಟನಲ್ಲಿ ರಾಷ್ಟ್ರೀಯ ನಗರ ವ್ಯಾಪಾರ ದೌತ್ಯ-ಹಾದಿಬದಿ ವ್ಯಾಪಾರಗಳ ಪುನರ್ ವಸತಿ-ಸಂತೆ ನಿರ್ಮಾಣ ಚಟುವಟಿಕೆಗಳಿಗೆ ರೂಪುರೇಷೆ ಒದಗಿಸಿರುವುದಾಗಿ, ನಗರಸಭೆಯ ಬಡಗು-ಪಶ್ಚಿಮ ದಿಕ್ಕಿನಲ್ಲಿ ಬರಿದಾಗಿರುವ ಪ್ರದೇಶದಲ್ಲಿ ಪುನರ್ ವಸತಿ ಒದಗಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕೇರಳ ಕಾಂಗ್ರೆಸ್ (ಜೆ) ಪ್ರತಿನಿಧಿ ನ್ಯಾಷನಲ್ ಅಬ್ದುಲ್ಲ, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.



