ತಿರುವನಂತಪುರ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಗರ್ಭಿಣಿಯರಿಗೆ ಕೇವಲ ಔಷಧಿ ಸಾಮಗ್ರಿಗಳ ಮಾತ್ರವಲ್ಲ, ಅವರು ಸೇವಿಸಬೇಕಾಗಿರುವ ತರಕಾರಿಗಳ ಕುರಿತಾದ ಪಟ್ಟಿಯನ್ನು ನಮೂದಿಸಿ ನೀಡಲಿದ್ದಾರೆ.
ಇದು ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿದ ಹೊಸ ಕ್ರಮವಾಗಿದೆ. ರಾಜ್ಯ ಆರೋಗ್ಯ ಮತ್ತು ಕೃಷಿ ಇಲಾಖೆ ಸಂಯುಕ್ತವಾಗಿ ಈ ಯೋಜನೆಗೆ ರೂಪು ನೀಡಿದೆ. ಗರ್ಭಿಣಿಯರ ಆರೋಗ್ಯ ಸಂರಕ್ಷಣೆಗೆ ಸೊಪ್ಪು ಮತ್ತು ತರಕಾರಿ ಪದಾರ್ಥಗಳ ಸೇವನೆ ಅತೀ ಅಗತ್ಯವಾಗಿದೆ. ಅದನ್ನು ಮನಗಂಡು ಆರೋಗ್ಯ ಇಲಾಖೆ ಇಂತಹ ಕ್ರಮಕ್ಕೆ ಮುಂದಾಗಿದೆ. ಅದರಂತೆ ಗರ್ಭಕಾಲದಲ್ಲಿ ಮಹಿಳೆಯರು ಸೇವಿಸಬೇಕಾಗಿರುವ ತರಕಾರಿಗಳನ್ನು ವೈದ್ಯರು ಔಷಧ ಪಟ್ಟಿಯಲ್ಲಿ ಬರೆದು ನೀಡಲಿದ್ದಾರೆ.
ಇದಕ್ಕೆ ಅಗತ್ಯದ ನೆರವನ್ನು ಕೃಷಿ ಇಲಾಖೆಯೂ ನೀಡಲಿದೆ. ಗರ್ಭಿಣಿಯರ ಫೆÇೀನ್ ನಂಬ್ರವನ್ನು ಆರೋಗ್ಯ ಇಲಾಖೆ ಕೃಷಿ ಇಲಾಖೆಗೆ ನೀಡಲಿದೆ. ಬಳಿಕ ತರಕಾರಿ ಮತ್ತು ಬೀಜಗಳು ಲಭಿಸಲಿದೆ ಎಂಬುದನ್ನು ಕೃಷಿ ಇಲಾಖೆಯ ವಲಂಟಿಯರುಗಳಿಗೆ ಕರೆದು ತಿಳಿಸುವರು. ಮೊದಲ ಹಂತದಲ್ಲಿ ಇದನ್ನು ಉಚಿತವಾಗಿ ನೀಡಲಾಗುವುದು. ತರಕಾರಿ ಕೃಷಿಗಳನ್ನು ಹೇಗೆ ನಡೆಸಬೇಕೆಂಬುವುದನ್ನು ಹೇಳಿಕೊಡಲಾಗುವುದು. ಅದಕ್ಕೆ ಅಗತ್ಯದ ಸೌಕರ್ಯಗಳನ್ನು ಒದಗಿಸಲಾಗುವುದು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗರ್ಭಿಣಿಯರ ಮನೆಗೆ ಸಂದರ್ಶಿಸಿ ಅವರು ಆಹಾರದೊಂದಿಗೆ ಸೊಪ್ಪು ಮತ್ತು ತರಕಾರಿ ಪದಾರ್ಥಗಳನ್ನು ಸೇವಿಸುತ್ತಿದ್ದಾರೆಯೇ ಎಂಬುವುದನ್ನು ಖಾತರಿಪಡಿಸುವರು.




