ಕಾಸರಗೋಡು: ಭಾರತೀಯ ವಾಯುಸೇನೆಯಲ್ಲಿ ಏರ್ ಮ್ಯಾನ್ ಹುದ್ದೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜ.20ರ ಮೊದಲು
www.airmenselection.cdac.in,www.careerindianairforce.cad.in
ಎಂಬ ವೆಬ್ ಸೈಟ್ ಗಳ ಮುಖಾಂತರ ಅರ್ಜಿ ಸಲ್ಲಿಸಬೇಕು. ಅವಿವಾಹಿತರಾಗಿರುವ ಪುರುಷರು ಏರ್ ಮ್ಯಾನ್ ಆಗಿ ಗ್ರೂಪ್ ಎಕ್ಸ್, ವೈ ಟ್ರೇಡ್ ಗಳಿಗೆ ನೇಮಕಗೊಳ್ಳಬಹುದು.
ಗ್ರೂಪ್ ಎಕ್ಸ್ ಟ್ರೇಡ್ ಗೆ (ಎಜ್ಯುಕೇಶನ್ ಇನ್ಸ್ಸ್ಟರಕ್ಟರ್ ಟ್ರೇಡ್ ಉಳಿದು) ಗಣಿತ, ಫಿಸಿಕ್ಸ್, ಇಂಗ್ಲೀಷ್ ಕಲಿತಿದ್ದು, ಕನಿಷ್ಠ ಶೇ 50 ಅಂಕದೊಂದಿಗೆ ಪ್ಲಸ್-ಟು/ ಇಂಟರ್ ಮೀಡಿಯಾ/ ತತ್ಸಮಾನ ಶಿಕ್ಷಣಾರ್ಹತೆ ಹೊಂದಿರಬೇಕು. ಯಾ ಕನಿಷ್ಠ ಶೇ 50 ಅಂಕಗಳೊಮದಿಗೆ ಸರಕಾರಿ ಅಂಗೀಕೃತ ಪಾಲಿಟೆಕ್ನಿಕ್ ನಲ್ಲಿ ಊರು ವರ್ಷಗಳ ಡಿಪೆÇ್ಲಮಾ ಪಡೆದಿರಬೇಕು. ಡಿಪೆÇ್ಲಮಾ ಮಟ್ಟದಲ್ಲಿ ಇಂಗ್ಲೀಷ್ ನಲ್ಲಿ ಸೇ 50 ಅಂಕ ಪಡೆದಿರಬೇಕು( ಡಿಪೆÇ್ಲಮಾ ಮಟ್ಟದಲ್ಲಿ ಇಂಗ್ಲೀಷ್ ಒಂದು ವಿಷಯವಲ್ಲದೇ ಇದ್ದಲ್ಲಿ, ಇಂಟರ್ ಮೀಡಿಯೇಟ್. ಹತ್ತನೇ ತರಗತಿಯಲ್ಲಿ ಇಂಗ್ಲೀಷ್ ನಲ್ಲಿ ಶೇ 50 ಅಂಕ ಪಡೆದಿರಬೇಕು.)
À್ರೂಪ್ ವೈ ಟ್ರೇಡ್ಗೆ (ಆಟೋ ಮೊಬೈಲ್ ಟೆಕ್ನೀಶಿಯನ್, ಇಂಡಿಯನ್ ಏರ್ ಫೆÇೀರ್ಸ್ (ಸೆಕ್ಯೂರಿಟಿ) ಮೆಡಿಕಲ್ ಅಸಿಸ್ಟೆಂಟ್, ಮ್ಯೂಸಿಷಿಯನ್ ಟ್ರೇಡ್ ಉಳಿದು) ಅರ್ಜಿ ಸಲ್ಲಿಸುವವರು ಯಾವುದೇ ಶಾಖೆಯಲ್ಲಿರುವ ಪ್ಲಸ್ ಟು/ ಇಂಟರ್ ಮೀಡಿಯೇಟ್/ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಒಟ್ಟು ಶೇ 50 ಅಂಕ ಪಡೆದಿರಬೇಕು. ಇಂಗ್ಲಿಷ್ ನಲ್ಲಿ ಸೇ 50 ಅಂಕ ಇರಬೇಕು. ಯಾ 2 ವರ್ಷದ ವೊಕೇಶನಲ್ ತರಬೇತಿಯಲ್ಲಿ ಇಂಗ್ಲೀಷ್ ನಲ್ಲಿ ಶೇ 50 ಅಂಕ ಪಡೆದಿರೇಕು.( ವೊಕೇಶನಲ್ ತರಬೇತಿಯಲ್ಲಿ ಇಂಗ್ಲಿಷ್ ಒಂದು ವಿಷಯವಲ್ಲದೇ ಇದ್ದಲ್ಲಿ , ಇಂಟರ್ ಮೀಡಿಯೇಟ್ / ಹತ್ತನೇ ತರಗತಿಯಲ್ಲಿ ಇಂಗ್ಲೀಷ್ ನಲ್ಲಿ ಶೇ 50 ಅಂಕ ಪಡೆದಿರಬೇಕು).
ಗ್ರೂಪ್ ವೈ ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್ ಗೆ ಮಾತ್ರ ಅರ್ಜಿ ಸಲಲಿಸಿರುವವರು ಪ್ಲಸ್ ಟು/ ಇಂಟರ್ ಮೀಡಿಯೇಟ್/ ತತ್ಸಮಾನ ಪರೀಕ್ಷೆಯಲ್ಲಿ ಫಿಸಿಕ್, ಕೆಮೆಸ್ಟ್ರಿ. ಬಯಾಲಜಿ, ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ ಒಟ್ಟು ಶೇ 50 ಅಂಕ ಪಡೆದಿರಬೇಕು. ಇಂಗ್ಲೀಷ್ ನಲ್ಲಿಮಾತ್ರ ಶೇ 50 ಅಂಕ ಪಡೆದವರೂ ಆಗಿರಬೇಕು.
ಅನೇಕ ಆಕರ್ಷಣೆ ಹೊಂದಿರುವ ಈ ಉದ್ಯೋಗದಲ್ಲಿ ಆಸಕ್ತರಾದವರು www.airmenselection.cdac.in,www.carerindianairforce.cdac.in
ಎಂಬ ವೆಬ್ ಸೈಟ್ ಗಳ ಮೂಲಕ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ರೂಪದಲ್ಲಿ 250 ರೂ. ಡೆಬಿಟ್/ಕ್ರೆಡಿಟ್ ಕಾರ್ಡ್ / ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕು. ಜೊತೆಗೆ ಯಾವ ಬ್ಯಾಂಕ್ ಶಾಳೆಯಲ್ಲಿ, ಚಲಾನ್ ಮೂಲಕ ಶುಲ್ಕ ಪಾವತಿಸಬಹುದು. ಅರ್ಹತಾ ಪರೀಕ್ಷೆಯ,
ಹತ್ತನೇ ತರಗತಿಯ, ಪ್ಲಸ್ ಟು ಪರೀಕ್ಷೆಯ ಅಂಕಪಟ್ಟಿ, ಪಾಸ್ ಪೆÇೀರ್ಟ್ ಗಾತ್ರದ ಫೆÇಟೋ, ಎಡ ಹೆಬ್ಬರೆರಳ ಗುರುತು, ಹಸ್ತಾಕ್ಷರ ಇತ್ಯಾದಿ ದಾಖಲೆಗಳನ್ನು ಅರ್ಜಿಯ ಜೊತೆಗೆ ಸ್ಕ್ಯಾನ್ ನಡೆಸಿ ಅಪ್ ಲೋಡ್ ಮಾಡಬೇಕು.





