HEALTH TIPS

ಎಣ್ಮಕಜೆ ಹವ್ಯಕ ವಲಯ ಸಭೆ


       ಪೆರ್ಲ: ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯ ಸಭೆ ವಲಯ ಶಿಷ್ಯ ಮಾಧ್ಯಮ ಪ್ರಮುಖ ಕಾಟುಕುಕ್ಕೆ ಘಟಕದ ವೆಂಕಟ್ರಮಣ ಭಟ್ ಕೋಡುಮಾಡು ಅವರ ನಿವಾಸದಲ್ಲಿ  ವಲಯ ಅಧ್ಯಕ್ಷ ಶಂಕರ ಪ್ರಸಾದ ಕುಂಚಿನಡ್ಕ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
     ವಂಕಟ್ರಮಣ ಭಟ್ ಧ್ವಜಾರೋಹಣ ನೆರವೇರಿಸಿದರು. ಶಂಖ ನಾದ, ಗುರುವಂದನೆ ಗೋವಂದನೆ, ಲಕ್ಷ್ಮೀನರಸಿಂಹ ಸ್ತೋತ್ರ ಪಠಣದೊಂದಿಗೆ ಸಭೆ ಪ್ರಾರಂಭವಾಯಿತು. ಸಭೆಯಲ್ಲಿ ಗತ ಸಭೆಯ ವರದಿ ವಾಚನ, ಲೆಕ್ಕಪತ್ರ ಹಾಗು ವಿಭಾಗವಾರು ವಿಮರ್ಶೆ ನಡೆಸಲಾಯಿತು.
     ಜ.12 ರಂದು `ಗೋವಿಗಾಗಿಮೇವು' ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗೆ ಮುಳಿಹುಲ್ಲು ಮೇವು ಸಂಗ್ರಹಿಸುವ ಶ್ರಮದಾನ ನಡೆಸಲು ತೀರ್ಮಾನಿಸಲಾಯಿತು. ಹಾಗು ಗೋಶಾಲೆಯಲ್ಲಿ ಗೋಮಯದ ಹಣತೆ ಮತ್ತು ವಿಭೂತಿ ತಯಾರಿಸಲು ಕಾರ್ಯಕರ್ತರ ಸಹಾಯ ಕೋರಲಾಯಿತು.
     ಜ.26 ರಂದು ಮಾಣಿಮಠದಲ್ಲಿ ಜರಗಲಿರುವ ಸೂತ್ರ ಸಂಗಮ ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕರ್ತರಾಗಿ ಸಹಕರಿಸಲು ತೀರ್ಮಾನಿಸಲಾಯಿತು. ವಲಯ ಮುಷ್ಠಿ ಭಿಕ್ಷಾ ಪ್ರಮುಖ ಯು.ಜಿ. ಶಿವಪ್ರಸಾದ ಅವರ ವಿಭಾಗ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸಿಲಾಯಿತು.
     ಸಭೆಯಲ್ಲಿ ಮಂಡಲದಿಂದ ಬಂದಿರುವ ಕಾರ್ಯಸೂಚಿಯನ್ನು ವಾಚಿಸಲಾಯತು ಹಾಗು ಮಾರ್ಚ್ 1ರಂದು ರಾಮಾಯಣ ಪಾರಾಯಣದ ಮಂಗಲಾಚರಣೆ ಗೋಕರ್ಣದಲ್ಲಿ ಜರಲಿರುವ ಮಾಹಿತಿ ತಿಳಿಸಲಾಯಿತು. ಬೆಳೆ ಸಮರ್ಪಣೆ, ದೀಪ ಕಾಣಿಕೆ ಸಂಗ್ರಹದ ಘಟವಾರು ದಿನಾಂಕ ನಿಗದಿ ಮಾಡಿ ಘಟಕ ಸಭೆಯೊಂದಿಗೆ ಜರಗಿಸಲು ತೀರ್ಮಾನಿಸಲಾಯಿತು. ವಲಯದ ಕಾಟುಕುಕ್ಕೆ ಘಟಕದ ಮೂವರು ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಕೊಡಲ್ಪಡುವ ವಿದ್ಯಾರ್ಥಿ ಸಹಾಯ ನಿ„ಯನ್ನು ಅರ್ಹರಾದ ವಿದ್ಯಾರ್ಥಿಗಳಾದ ರೂಪ ಬೋಳುಬೈಲು ಹಾಗು ಜ್ಯೋತಿ ಲಕ್ಷ್ಮೀ ಸೂರ್ಡೇಲು ಅವರಿಗೆ  ವಿತರಿಸಲಾಯಿತು.
     ಸುಮಾರು 600 ವರ್ಷಗಳ ಹಿಂದೆ ಶಿರಸಿಯಿಂದ ಬಂದು ಕೇರಳದಲ್ಲಿ ವಾಸಿಸುತ್ತಿದ್ದು ಪ್ರಸ್ತುತ ಪೆರ್ಲದಲ್ಲಿ ವಾಸ್ತವ್ಯವಿರುವ ಹವ್ಯಕ ಬ್ರಾಹ್ಮಣರಾದ ಮಾಧವನ್ ನಂಬೂದಿರಿ ಅವರನ್ನು ಶ್ರೀ ಗುರುಗಳ ನಿರ್ದೇಶನದ ಮೇರೆಗೆ ಎಣ್ಮಕಜೆ ವಲಯಕ್ಕೆ ಸೇರ್ಪಡೆಗೊಳಿಸಿದ ಮಾಹಿತಿ ನೀಡಲಾಯಿತು.
       ವಲಯ ಕಾರ್ಯದರ್ಶಿಗಳು ತಮ್ಮ ಮಗಳ ಬಾಬ್ತು ವಿಷ್ಣು ಗುಪ್ತ ವಿಶ್ವವಿದ್ಯಾಲಯಕ್ಕೆ ದೇಣಿಗೆಯನ್ನು ಸಭೆಯಲ್ಲಿ ಗುರಿಕ್ಕಾರರ ಹಸ್ತ ಸಮರ್ಪಿಸಿದರು. ಕಾಟುಕುಕ್ಕೆ ಘಟಕದ ಗುರಿಕ್ಕಾರರೂ ಹಾಗು ಅಧ್ಯಕ್ಷ ಬಿ.ವಿ. ನಾರಾಯಣ ಭಟ್ ಅವರು ಘಟಕ ಸಭೆಯ ಅಂಗವಾಗಿ ಘಟಕದ ಶಿಷ್ಯರಿಗೆ ದೀಪಕಾಣಿಕೆ ಹಾಗು ವಿಷ್ಣು ಗುಪ್ತ ವಿಶ್ವವಿದ್ಯಾಲಯ ಮಾಹಿತಿಗಳನ್ನು ನೀಡಿದರು. ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಶ್ರೀ ಕಾರ್ಯಕರ್ತರು, ಶ್ರೀ ಮಠದ ಶಿಷ್ಯ ಭಕ್ತರು, ಅಮೃತಧಾರಾ ಗೋಶಾಲೆಯ ಅಧ್ಯಕ್ಷರು ಹಾಗು ಕೋಶಾಧಿಕಾರಿಗಳು ಉಪಸ್ಥಿತರಿದ್ದರು.
        ಮುಂದಿನ ಸಭೆಯನ್ನು ವಲಯ ಸಹಾಯ ವಿಭಾಗ ಪ್ರಮುಖ ಬಾಳುಮೂಲೆ ಸತ್ಯಪ್ರಕಾಶ ಪರ್ಪಕರ್ಯ ಅವರ ನಿವಾಸದಲ್ಲಿ ಜರಗಿಸಲು ತೀರ್ಮಾನಿಸಲಾಯಿತು. ರಾಮತಾರಕ ಮಂತ್ರ, ಶಾಂತಿ ಮಂತ್ರ ದ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries