ಮಂಜೇಶ್ವರ: ದಕ್ಷಿಣ ಕನ್ನಡ ಕುಲಾಲ ಸಂಘ ಮತ್ತು ಕುಲಾಲ ಸಮಾಜ ಬೆಂಗಳೂರು ಸಂಘಟನೆಗಳು ಒಗ್ಗೂಡಿ `ಕುಲಾಲ ಸಂಘ ಬೆಂಗಳೂರು' ರಚನೆಯಾಗಿದ್ದು, ಪುರುಷೋತ್ತಮ ಚೇಂಡ್ಲ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುವರ್ಣ ಮಹೋತ್ಸವ ಆಚರಿಸುತ್ತಿರುವ ಕುಲಾಲ ಸಂಘ ಬೆಂಗಳೂರು ಇದರ ಮುಂದಿನ ಎರಡು ವರ್ಷ ಅವಧಿಗೆ ಇತರ ಪದಾಧಿಕಾರಿಗಳನ್ನೂ ಆಯ್ಕೆಮಾಡಲಾಯಿತು.
ಗೌರವಾಧ್ಯಕ್ಷರಾಗಿ ಈಶ್ವರ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಕುಲಾಲ್ ಜನ್ನಾಡಿ ಹಾಗು ಕೋಶಾಧಿಕಾರಿಯಾಗಿ ಶೇಸಪ್ಪ ಪೆÇಸಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಠಲ ಕನೀರ್‍ತೋಟ, ಜೆ.ಎನ್.ಮೂಲ್ಯ, ಎ.ಎನ್.ಕುಲಾಲ್, ಬಿ.ರಾಮಣ್ಣ ಕುಲಾಲ್, ಜೊತೆ ಕಾರ್ಯದರ್ಶಿಗಳಾಗಿ ರಮಾನಾಥ ಏತಡ್ಕ, ಕೆ.ಎಸ್.ರಾಜು ಕುಲಾಲ್, ಉಪ ಕಾರ್ಯದರ್ಶಿಗಳಾಗಿ ಯು.ಕಿಟ್ಟಣ್ಣ, ಡಾ.ಆನಂದ ಕುಲಾಲ್, ಮಧುಕಿರಣ ಚಂದ್ರಿಗೆ, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಕೃಷ್ಣಪ್ಪ ಮೂಲ್ಯ, ಹಿಮಕರ್ ಬಂಜನ್, ಮಹಿಳಾ ಘಟಕದ ಸಂಚಾಲಕರಾಗಿ ಅನುಸೂಯ ಕೃಷ್ಣಪ್ಪ, ವಸಂತಿ ಗಿರೀಶ್ ಆಯ್ಕೆಯಾಗಿದ್ದಾರೆ.





