ಕಾಸರಗೋಡು: ದೇಶೀಯ ಅಧ್ಯಾಪಕ ಪರಿಷದ್ (ಎನ್‍ಟಿಯು) ಜಿಲ್ಲಾ ಸಮಾವೇಶ ಕಾಸರಗೋಡು ಜಿ.ಯು.ಪಿ.ಎಸ್. ನಲ್ಲಿ ಜರಗಿತು.
ಎನ್.ಟಿ.ಯು. ಕಾಸರಗೋಡು ಜಿಲ್ಲಾ ಅಧ್ಯಕ್ಷ ಕುಂಞಂಬು ವಿ.ಕೆ. ಅಧ್ಯಕ್ಷತೆ ವಹಿಸಿದರು. ಅಖಿಲ ಭಾರತೀಯ ಸಹಕಾರ ಭಾರತಿ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ, ಭಾರತೀಯ ಮಜ್ದೂರ್ ಸಂಘ್ ಕಾಸರಗೋಡು ಕಾರ್ಯದರ್ಶಿ ಶ್ರೀನಿವಾಸ್, ಎನ್.ಜಿ.ಒ. ಸಂಘ್ ಕಾಸರಗೋಡು ಕಾರ್ಯದರ್ಶಿ ಸಿ.ವಿಜಯನ್ ಶುಭಹಾರೈಸಿದರು.
ಎನ್.ಟಿ.ಯು. ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಕೆ. ಸ್ವಾಗತಿಸಿದರು. ಕಾಸರಗೋಡು ಉಪಜಿಲ್ಲಾ ಎನ್‍ಟಿಯು ಅಧ್ಯಕ್ಷ ಸತೀಶನ್ ವಂದಿಸಿದರು.
ಜ.10 ರಂದು ಕಾಸರಗೋಡು ಜಿಲ್ಲಾ ಎನ್.ಟಿ.ಯು. ಉಪಾಧ್ಯಕ್ಷ ರಾಧಾಕೃಷ್ಣ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ವಿಘ್ನೇಶ್ವರ ಕೆದುಕೋಡಿ ಶುಭಹಾರೈಸಿದರು. ಕಾಂಞಂಗಾಡ್ ಉಪಜಿಲ್ಲೆ ಎನ್.ಟಿ.ಯು. ಅಧ್ಯಕ್ಷ ರಾಜೀವನ್ ಸ್ವಾಗತಿಸಿದರು. ಜಿಲ್ಲಾ ಸಮಾವೇಶದಂಗವಾಗಿ ಮೆರವಣಿಗೆ ನಡೆಯಿತು.




