ಕುಂಬಳೆ: ಪುತ್ತಿಗೆ ಶ್ರೀಕಿನ್ನಿಮಾಣಿ ದೈವ ಮತ್ತು ಶ್ರೀಸುಬ್ರಾಯ ದೇವಸ್ಥಾನದಲ್ಲಿ ನೂತನ ಗೋಪುರ ಉದ್ಘಾಟನೆ ಹಾಗೂ ಮಕರ ಸಂಕ್ರಮಣ ಮಹೋತ್ಸವ ಜ.12 ರಿಂದ 15ರ ವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಜ.12 ರಂದು ಸಂಜೆ 4ಕ್ಕೆ ಬಬ್ಬರ್ಯಕಲ್ಲಿನಿಂದ ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಜ.13 ರಂದು ಬೆಳಿಗ್ಗೆ 9 ರಿಂದ ಭಜನ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಗಣಪತಿಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ರಿಂದ ನಡೆಯಲಿರುವ ನೂತನ ಗೋಪುರ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ರಾತ್ರಿ 7ಕ್ಕೆ ಅತ್ತಾಳ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಜ.14 ರಂದು ಬೆಳಿಗ್ಗೆ 6ಕ್ಕೆ ಉಷಃಪೂಜೆ, ಗಣಪತಿಹವನ, 10ಕ್ಕೆ ನವಕಾಭಿಷೇಕ, ತುಲಾಭಾರಸೇವೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕ, 8.30 ರಿಂದ ಕುಮಾರಸ್ವಾಮಿ ನೃತ್ಯಾಲಯ ಪುತ್ತಿಗೆಯ ಭವ್ಯಶ್ರೀ ಬಾಡೂರು ನಿರ್ದೇಶನದಲ್ಲಿ ನೃತ್ಯವೈವಿಧ್ಯ ನಡೆಯಲಿದೆ. ರಾತ್ರಿ 8.30ಕ್ಕೆ ಮಹಾಪೂಜೆ, ಶ್ರೀದೇವರ ರಾಜಾಂಗಣ ಪ್ರವೇಶ, ಶ್ರೀಕಿನ್ನಿಮಾಣಿ ಪೂಮಾಣಿ ದೈವಸ್ಥಾನದಲ್ಲಿ ತಂಬಿಲ ನಡೆಯಲಿದೆ. ಜ.15 ರಂದು ಬೆಳಿಗ್ಗೆ 9ಕ್ಕೆ ಶ್ರೀದೇವರ ರಾಜಾಂಗಣ ಪ್ರವೇಶ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಮಂತ್ರಾಕ್ಷತೆ, ಪ್ರಸಾದ ಭೋಜನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.





