ಕಾಸರಗೋಡು: ಹೊನ್ನೆಮೂಲೆ ಶ್ರೀ ಚೆನ್ನಮಲ್ಲಿಕಾರ್ಜುನ ದೇವರ ಬಾಲಾಲಯ ಪ್ರತಿಷ್ಠೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಚೆನ್ನಮಲ್ಲಿಕಾರ್ಜುನ ಟ್ರಸ್ಟ್‍ನ ಅಧ್ಯಕ್ಷ ಡಾ.ಅನಂತ ಕಾಮತ್, ಕಾರ್ಯದರ್ಶಿ ಲೋಕೇಶ್ ಅಣಂಗೂರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಗೌರವಾಧ್ಯಕ್ಷ ಗೋಪಾಲ, ಉಪಾಧ್ಯಕ್ಷ ರೋಹಿತಾಕ್ಷ, ಕೋಶಾಧಿಕಾರಿ ಪ್ರವೀಣ ಹಾಗು ಭಕ್ತ ವೃಂದದವರು ಉಪಸ್ಥಿತರಿದ್ದರು.





