ಉಪ್ಪಳ: ಕರ್ನಾಟಕದ ಮುಖ್ಯಮಂತ್ರಿ ಬಿಎಸ್.ಎಡಿಯೂರಪ್ಪನವರು ಖಾಸಗೀ ಕಾರ್ಯಕ್ರಮದ ನಿಮಿತ್ತ ಇತ್ತೀಚೆಗೆ ಕೇರಳದ ತಳಿಪ್ಪರಂಬ ರಾಜರಾಜೇಶ್ವರ ಕ್ಷೇತ್ರಕ್ಕೆ ಮತ್ತು ತಿರುವನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರಕ್ಕೆ ಆಗಮಿಸಿದಾಗ ಸಿಪಿಎಂ ಮತ್ತು ಡಿವೈಎಫ್‍ಐ ಕಾರ್ಯಕರ್ತರು ಸರ್ಕಾರದ ಅಧಿಕಾರದ ಅಹಂಕಾರದ ಮದದಿಂದ ರಸ್ತೆ ತಡೆಮಾಡಿ ಕಪ್ಪು ಧ್ವಜ ಹಿಡಿದು ಪ್ರತಿಭಟಿಸಿ ಮುಖ್ಯಮಂತ್ರಿಯವರ ಕಾರಿಗೆ ತಡೆಯೊಡ್ಡಿ ಹಾನಿ ಎಸಗಿದ ಕೃತ್ಯ ಅತ್ಯಂತ ಹೀನವಾಗಿರುವುದಾಗಿದ್ದು, ಇದು ದೇವರ ನಾಡಿನ ಸಂಸ್ಕೃತಿಗೆ ಭೂಷಣವಲ್ಲವೆಂದು ಕರ್ನಾಟಕ ರಾಜ್ಯ ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪೈವಳಿಕೆ ಪಂಚಾಯತಿ ಬಿಜೆಪಿ ಕಚೇರಿಗೆ ಜ.4 ರಂದು ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುವ ವಿಪಕ್ಷಗಳ ಪ್ರತಿಭಟನೆ ಅಲ್ಪಸಂಖ್ಯಾತರನ್ನು ತಪ್ಪುದಾರಿಗೆ ಸರಿಸುವ ಸಂಚಾಗಿದೆ. ಇದು ಯಶಸ್ವಿಯಾಗದು.ಕೇರಳ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಎಡಬಲ ಶಾಸಕರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿರುವುದು ಸಂವಿಧಾನ ಬಾಹಿರವಾಗಿದೆ.ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಗೆ ಕಣ್ಣೂರು ವಿವಿಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯ ನೆಪದಲ್ಲಿ ಅಪಮಾನ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಸವಾಲೆಸೆದಿರುವುದಾಗಿ ಸಚಿವರು ಆರೋಪಿಸಿದರು.
ಕರ್ನಾಟಕದ ನೆರೆ ಸಂತ್ರಸ್ತರಿಗೆ ಪ್ರಧಾನಿ ಪರಿಹಾರ ಘೋಶಿಸಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರದಾನಿಯವರು ಈಗಾಗಲೇ ಪರಿಹಾರವಾಗಿ ಪ್ರಥಮ ಕಂತಿನಲ್ಲಿ 12 ಸಹಸ್ರ ಕೋಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಹಾರ ನಿ„ಯನ್ನು ಇನ್ನಷ್ಟು ಕಂತಿನ ಮೂಲಕ ಬಿಡುಗಡೆಗೊಳಿಸುವರು. 6 ಕೋಟಿ ರೈತರಿಗೆ ಕಿಸಾನ್ ಕಾರ್ಡ್ ವಿತರಿಸಿದ್ದಾರೆ. 23 ಸಹಸ್ರ ಮಹಿಳಾ ಮೀನುಗಾರರ ಸಾಲಮನ್ನಾ ಮಾಡಿರುವರು.ಮುಂದಿನ ದಿನಗಳಲ್ಲಿ ದೇಶದಾದ್ಯಂತ ಕೃಷಿಕರಿಗೆ ಇನ್ನಷ್ಟು ಸಹಾಯ ಯೋಜನೆಯನ್ನು ಕೈಗೊಳ್ಳಲಿರುವರೆಂದರು.ಕರ್ನಾಟಕದ ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರಿಗೆ ಈ ತಿಂಗಳ ಕೊನೆಯಲ್ಲಿ ಸಚಿವ ಸ್ಥಾನದ ಭಾಗ್ಯ ಒದಗಲಿರುವುದಾಗಿ ಸಚಿವರು ತಿಳಿಸಿದರು.
ಬಿಜೆಪಿ ಪೈವಳಿಕೆ ಪಂಚಾಯತಿ ಪ್ರಧಾನ ಕಾರ್ಯದರ್ಶಿ ಎಸ್.ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಸಚಿವರಿಗೆ ಶಾಲು ಹೊದೆಸಿ ಸ್ವಾಗತಿಸಿದರು.ಪಕ್ಷದ ನಾಯಕರಾದ ಸರೋಜಾ ಆರ್ ಬಲ್ಲಾಳ್,ಸದಾನಂದ ರೈ ಕೊಮ್ಮಂಡ,ಹರೀಶ್ ಬೊಟ್ಟಾರಿ,ಕಿಶೋರ್ ಕುಮಾರ್ ಪೆರ್ವಡಿ, ಕೆ.ಸುಂದರ ಶೆಟ್ಟಿ ಕಳಾಯಿ,ಅನಂತಕೃಷ್ಣ ಭಟ್ ಕೊಮ್ಮೆ ,ರಾಮ ಏದಾರು,ರವಿಚಂದ್ರ ಚೇರಾಲ್ ಮತ್ತು ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಚ್ಚುತ ಚೇವಾರು ಸಹಿತ ಹಲವರು ಉಪಸ್ಥಿತರಿದ್ದರು.





