ಕಾಸರಗೋಡು: ಕೇರಳ ರಾಜ್ಯ ಹಿಂದುಳಿದ ವರ್ಗದ ಕಮೀಷನರ್ ತಿರುವನಂತಪುರ ಅವರು ಎರ್ನಾಕುಳಂನ ಸರ್ಕಾರಿ ಅತಿಥಿಗೃಹದಲ್ಲಿ ನಡೆಸಿದ ಸಿಟ್ಟಿಂಗ್‍ಗೆ ಕಮೀಷನರ್‍ರ ಆಹ್ವಾನದ ಮೇರೆಗೆ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಉಪಾಧ್ಯಕ್ಷರಾದ ಸತೀಶ್ ಕೂಡ್ಲು ಅವರ ನೇತೃತ್ವದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರ ಮತ್ತು ಬೇಕಲ ನಿವಾಸಿ ರಾಧಾಕೃಷ್ಣ ಅವರನ್ನೊಳಗೊಂಡ ನಿಯೋಗ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಕೇಂದ್ರ ಸರಕಾರದ ಆಜ್ಞೆಗಳ ಪ್ರತಿಗಳನ್ನು ಮತ್ತು ಸಮಾಜದ ಕುರಿತು ಲಿಖಿತವಾದ ವಿವರವನ್ನು ಕಮೀಷನರಿಗೆ ಸಮರ್ಪಿಸಿತು.
ತ್ರಿಸದಸ್ಯ ಕಮೀಷನ್‍ನ ಮುಖ್ಯಸ್ಥರಾದ ನಿವೃತ್ತ ಜಸ್ಟೀಸ್ ಶಶಿಧರ್ ಅವರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ ಕೆ.ಇ.ಟಿ. ಡಿಗ್ರಿ ಇತ್ಯಾದಿಗಳ ಪ್ರವೇಶಕ್ಕಾಗಿರುವ ಸಾಫ್ಟ್‍ವೇರ್‍ನಲ್ಲಿ ಕೋಟೆಯಾರ್ ಎಂಬ ಶಬ್ದವನ್ನು ಸೇರಿಸಬೇಕೆಂದು ಪ್ರತ್ಯೇಕ ಮನವಿ ಮಾಡಿದರು. ಜಸ್ಟೀಸ್ ಅವರು ಈ ಕುರಿತು ವಿವರಣೆಯನ್ನು ಶೇಖರಿಸಿ ಮುಂದಿನ ಸಿಟ್ಟಿಂಗ್‍ಗೆ ಮೊದಲಾಗಿ ಸಲ್ಲಿಸಬೇಕೆಂದು ಅ„ಕಾರಿಗಳಿಗೆ ಆದೇಶ ನೀಡಿದರು.



