ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸ್ವರ್ಣ ಮಹೋತ್ಸವದ ಪೂರ್ವಭಾವಿಯಾಗಿ ಜ.15 ಮಕರ ಸಂಕ್ರಮಣ ದಿನವಾದ ಇಂದು ಸಂಜೆ 3 ಗಂಟೆಯಿಂದ 4 ಗಂಟೆಯ ವರೆಗೆ 11 ನೇ ತರಗತಿಯ ಅಂಗನೆಯರಿಂದ `ಮೆಗಾ ತಿರುವಾದಿರ' ಪ್ರದರ್ಶನಗೊಳ್ಳಲಿದೆ.
ಚಿನ್ಮಯ ವಿದ್ಯಾಲಯದ ಅಧ್ಯಾಪಿಕೆಯರಾದ ಸಿಂಧು ಶಶೀಂದ್ರನ್, ಧನಶ್ರೀ ಬಿ. ಮೇಘನ, ಸುಮಿ, ಶೀನ ಕೆ.ಪಿ. ಮೊದಲಾದವರು ವಿದ್ಯಾರ್ಥಿನಿಯರನ್ನು ಈ ರಂಗದಲ್ಲಿ ಸಿದ್ಧಗೊಳಿಸಿರುವರು. ಚಿನ್ಮಯ ವಿದ್ಯಾಲಯ ಕಾಸರಗೋಡು ಒಂದು ವರ್ಷ ಕಾಲ ಹಮ್ಮಿಕೊಂಡಿರುವ ಸಮಾರಂಭದ ಉದ್ಘಾಟನೆಯನ್ನು ಚಿನ್ಮಯ ಮಿಷನ್‍ನ ಮುಖ್ಯಸ್ಥ ಸ್ವಾಮಿ ಸ್ವರೂಪಾನಂದಜಿಯವರು ಜ.27 ರಂದು ನೆರವೇರಿಸಲಿರುವರು.




