ಕಾಸರಗೋಡು: ಮಸ್ಕತ್ ನ ಪೀಠೋಪಕರಣ ಸಂಸ್ಥೆಯೊಂದರಲ್ಲಿ ಪ್ರಬಂಧಕರಾಗಿದ್ದ ವ್ಯಕ್ತಿಯೊಬ್ಬರಿಗೆ ಕಡ್ಡಾಯ ನಿವೃತ್ತಿ ನೀಡಿ, ನಿಬಂಧನೆಯಂತೆ ಊರಿಗೆ ಮರಳುವ ವಿಮಾನ ಟಿಕೆಟ್, 6 ತಿಂಗಳ ವೇತನ ಸಹಿತ ಸೌಲಭ್ಯಗಳನ್ನು ನೀಡದೆ ವಂಚಿಸಿದ ಪ್ರಕರಣಕ್ಕೆ ಸಂಬಮಧಿಸಿ ಪಡುವಳಂನಿವಾಸಿ ಕೇಶವನ್ ಎಂಬವರು ಸಲ್ಲಿಸಿದ ದೂರಿನಹಿನ್ನೆಲೆಯಲ್ಲಿ ಪ್ರದಾನ ಕಾರ್ಯದರ್ಶಿ, ನೋರ್ಕ ಇಲಾಖೆಗೆ ಹಸ್ತಾಂತರಿಸಲು ಜಿಲ್ಲಾ ಆನಿವಾಸಿ ದೂರು ಪರಿಹಾರ ಫಾರಂ ತೀರ್ಮಾನಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆನಿವಾಸಿ ಕಲ್ಯಾಣನಿಧಿ ಮಂಡಳಿಯಲ್ಲಿ ಸದಸ್ಯತನ ಪಡೆದಿದ್ದು, ಪ್ರತಿ ಕಂತನ್ನು ಪಾವಸತಿಸುತ್ತಿದ್ದು, ಹೃದ್ರೋಗಕ್ಕೆ ಸಂಬಮಧಿಸಿ ಆರ್ಥಿಕ ಸಹಾಯ ಒದಗಿಸುವಂತೆ ಸಲ್ಲಿಸಲಾದ ಅರ್ಜಿಯೊಂದನ್ನು ಪ್ರವಾಸಿ ಕಲ್ಯಾಣನಿಧಿ ಮಂಡಳಿಗೆ ನೀಡಲು ತೀರ್ಮಾನವಾಗಿದೆ.
ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಕೇರಳ ಆನಿವಾಸಿ ಸಂಘ ರಾಜ್ಯ ಸಮಿತಿ ಉಪಧ್ಯಕ್ಷ ಪಿ.ಕೆ.ಅಬ್ದುಲ್ಲ, ನೋರ್ಕಾ ರೂಟ್ಸ್ ನ ಕೃಷ್ಣಕುಮಾರಿಕೆ.ವಿ., ಜಿಲ್ಲಾ ಪ್ರಭಾರ ಕಾರ್ಯಕಾರಿ ಅಧಿಕಾರಿ ಕೆ.ಎಲ್.ಆರ್.ಕೆ.ಡಬ್ಲ್ಯೂ.ಬಿ.ಟಿ. ರಾಕೇಶ್, ಪಿ.ಎಂ.ಧನೇಶ್ ಉಪಸ್ಥಿತರಿದ್ದರು.



