ಕಾಸರಗೋಡು: ಹೊಸದುರ್ಗ ಜಿಲ್ಲಾ ಜೈಲಿನಲ್ಲಿ ನಿರ್ಮಿಸಲಾದ 2 ಸಾವಿರ ಪ್ರಕೃತಿ ಸ್ನೇಹಿ ಕಾಗದದ ಫ್ರೀಡಂ ಪೆನ್ ಗಳನ್ನು ಹರಿತ ಕೇರಳಂ ಮಿಷನ್ ವತಿಯಿಂದ ಜ.21,22ರಂದು ತಿರುವನಂತಪುರಂನಲ್ಲಿ ನಡೆಯುವ ರಾಜ್ಯ ಮಟ್ಟದ ಶುಚಿತ್ವ ಸಂಗಮ ಕಾರ್ಯಕ್ರಮಕ್ಕಾಗಿ ರವಾನಿಸಲಾಗಿದೆ. ಈ ಸಂಬಂಧ ಜಿಲ್ಲಾ ಜೈಲಿನಲ್ಲಿ ನಡೆದ ಸಮಾರಂಭದಲ್ಲಿ ಜೈಲು ವರಿಷ್ಠಾಧಿಕಾರಿ ಕೆ.ವೇಣು ಅವರು ಹರಿತ ಕೇರಳಂಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರಿಗೆ ಹಸ್ತಾಂತರಿಸಿದರು. ಸಹಾಯಕ ವರಿಷ್ಠಾಧಿಕಾರಿ ಪಿ.ಗೋಪಾಲಕೃಷ್ಣನ್, ಸಹಾಯಕ ಜೈಲು ಅಧಿಕಾರಿ ಕೆ.ಪಿ.ಬಿಜು, ಕೆ.ಸುಮೋದ್ ಉಪಸ್ಥಿತರಿದ್ದರು.
ರಾಜ್ಯ ಮಟ್ಟದ ಶುಚಿತ್ವ ಸಂಗಮದಲ್ಲಿ ಕಾಞಂಗಾಡ್, ನೀಲೇಶ್ವರ ನಗರಸಭೆಗಳ , ಬೇಡಡ್ಕ, ಮಡಿಕೈ, ಕಿನಾನೂರು-ಕರಿಂದಳಂ, ಚೆರುವತ್ತೂರು,ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಗಳ ಮಂದಿ ಜಿಲ್ಲೆಯನ್ನು ಪ್ರತಿನಿಧಿಸುವರು. ಈ ವೇಳೆ ನಡೆಯುವ ವಸ್ತುಪ್ರದರ್ಶನದಲ್ಲಿ ಮಡಿಕೈ,ಬೆಡಡ್ಕ ಪ್ರದೇಶಗಳಿಮದ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಬದಲಿಗೆ ಬಳಸುವ ಪ್ರಕೃತಿ ಸ್ನೇಹಿ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ.




