ಕಾಸರಗೋಡು: ಪಿಲಿಕೋಡ್ ಗ್ರಾಮಪಂಚಾಯತ್ ನಲ್ಲಿ ನಡೆದ ನೌಕರಿ ಖಾತರಿ ಯೋಜನೆಯ ಸಾಲಮೇಳವನ್ನು ನೀಲೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಪಿ.ಪಿ.ಜಾನಕಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಈ ಸಾಲ ಮೇಳ ಆಸ್ತಿ ಅಭಿವೃದ್ಧಿ ಯೋಜನೆಗೆ ಮೊದಲ ಹೆಜ್ಜೆಯಾಗಲಿದೆ. ಹಣಕಾಸಿನ ಮುಗಟ್ಟಿನಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಮಂದಿಗೆ ಬಡತನ ನೀಗಿಸಲು ಈ ಸಾಲ ಮೇಳ ಪೂರಕವಾಗಲಿದೆ ಎಂದು ಅವರು ಹೇಳಿದರು.
ಪಿಲಿಕೋಡ್ ಗ್ರಾಮಪಂಚಾಯತ್ ಉಪಾಯಕ್ಷೆ ಪಿ.ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ನೌಕರಿ ಖಾತರಿ ಯೋಜನೆಯ ಜಿಲ್ಲಾ ಸಂಚಾಲಕ ಕೆ.ಪ್ರದೀಪನ್ ಸಾಲದ ಚೆಕ್ ವಿತರಿಸಿದರು. ನೀಲೇಶ್ವರ ಬ್ಲೋಕ್ ಅಭಿವೃದ್ಧಿ ಅಧಿಕಾರಿ ಆರ್.ಸಜೀವನ್, ಕೊಡಕ್ಕಾಡ್ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ.ವಿ.ನಾರಾಯಣನ್, ನೀಲೇಶ್ವರ ಬ್ಲೋಕ್ ವಿಸ್ತರಣಾಧಿಕಾರಿ ಕೆ.ಜಿ.ಬಿಜುಕುಮಾರ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕುಂuಟಿಜeಜಿiಟಿeಜರಾಮನ್, ಕೊಡಕ್ಕಾಡ್ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಕೆ.ಪ್ರಭಾಕರನ್ ಮೊದಲಾದವರು ಉಪಸ್ಥಿತರಿದ್ದರು. ಪಿಲಿಕೋಡ್ ಗ್ರಾಮಪಂಚಾಯತ್ ಕಾರ್ಯದರ್ಶ ಕೆ.ರಮೇಶ್ ಸ್ವಗತಿಸಿದರು. ಸಹಾಯಕ ಕಾರ್ಯದರ್ಶಿ ಕೆ.ವಿನಯನ್ ವಂದಿಸಿದರು.





