ಕಾಸರಗೋಡು: ರಾಜ್ಯದ ಪ್ರಥಮ ನೌಕರಿ ಖಾತರಿ ಸಾಲ ಮೇಳ ಜಿಲ್ಲೆಯ ಪಿಲಿಕೋಡ್ ಗ್ರಾಮಪಂಚಾಯತ್ ನಲ್ಲಿ ನಡೆಯಿತು. ನೀಲೇಶ್ವರ ಬ್ಲೋಕ್ ಪಂಚಾಯತ್ ಮತ್ತು ಪಿಲಿಕೋಡ್ ಗ್ರಾಮಪಂಚಾಯತ್ ಗಳು ವ್ಯಕ್ತಿಗತ ಆಸ್ತಿನಿರ್ಮಾಣದ ಫಲಾನುಭವಿಗಳಿಗೆ ಸಾಲ ಮೇಳದ ಮೂಲಕ ರಾಜ್ಯಕ್ಕೆ ನೂತನ ಮಾದರಿಯಾಗಿದೆ. 5 ಜೆ.ಎಲ್.ಜಿ.(ಜಾಯಿಂಟ್ ಲಯಬಿಲಿಟಿ ಗ್ರೂಪ್) ಗಳ ಮೂಲಕ 31 ಫಲಾನುಭವಿಗಳಿಗೆ ಮೊದಲಹಂತದಲ್ಲಿ ಸಾಲ ಮಂಜೂರು ಮಾಡಲಾಗಿದೆ. ನೌಕರಿ ಖಾತರಿ ಯೋಜನೆ ಅಂಗವಾಗಿ ನಿರ್ಮಿಸಲಾಗುವ ಮೇಕೆಯ ಗೂಡು, ಕೋಳಿ ಗೂಡು, ಹಸುವಿನಹಟ್ಟಿಇತ್ಯಾದಿಗಳಿಗೆ ಸಾಮಾಗ್ರಿ ಖರಿದಿಸಲು ಮೊಬಲಗು ಸಾಲದ ಮೂಲಕ ಲಭಿಸುತ್ತಿದೆ. ಸಾಧಾರಣ ಗತಿಯಲ್ಲಿ ಈ ಮೊಬಲಗನ್ನು ಫಲಾನುಭವಿಯೇ ಹೂಡಬೇಕು. ಆದರೆ ಹಣಕಾಸಿನ ಮುಗ್ಗಟ್ಟಿನಪರಿಣಾಮ ನಿರ್ಮಾಣನಡೆಯದೇ ಇರುವ ಮಂದಿಗೆ ಕೈಸಹಾಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 295900 ರೂ. ಫಲಾನುಭವಿಗೆ ಮೊದಲ ಸಾಲಮೇಳದಲ್ಲಿ ಲಭಿಸಲಿದೆ. ನೌಕರಿ ಖಾತರಿ ಯೋಜನೆ ಮೂಲಕ ಸಾಲಮೇಳ ಕೊಡಕ್ಕಾಡ್ ಸೇವಾ ಸಹಕಾರಿ ಬ್ಯಾಂಕ್ ನೊಂದಿಗೆ ಸೇರಿ ನಡೆಸಲಾಗುತ್ತಿದೆ.
ಏನಿದು ಯೋಜನೆ ?
ಈ ಯೋಜನೆಯಲ್ಲಿ ಪ್ರಥಮಹಂತದಲ್ಲಿ ಕೃಷಿಕ ಕಲ್ಯಾಣ ಯೋಜನೆಗಳನನು ಜಾರಿಗೊಳಿಸಲಾಗುತ್ತಿದೆ. ದರೆ ವ್ಯಕ್ತಿಗತ ಯೋಜನೆಯೊಂದನ್ನು ನಡೆಸುವ ವೇಳೆ ಸಾಮಾಗ್ರಿಗಳ ಖರೀದಿಗೆ ಫಲನುಭವಿಯೇ ವೆಚ್ಚ ವಹಿಸಿಕೊಳ್ಳಬೇಕು. ಸರಕಾರ ನಂತರ ಅದನ್ನು ನೀಡುವುದಿದ್ದರೂ, ಕೆಲವೊಮ್ಮೆ ಈ ವೆಚ್ಚ ಭರಿಸುವುದು ಜನತೆಗೆ ಕಷ್ಟವಾಗುತ್ತದೆ. ಇದಕ್ಕೊಂದು ಪರಿಹಾರ ಎಂಬ ನಿಟ್ಟಿನಲ್ಲಿ ಸಾಲಮೇಳ ನಡೆಸಲಾಗುತ್ತಿದೆ. ಕಯ್ಯೂರು-ಚೀಮೇನಿ ಗ್ರಾಮಪಂಚಾಯತ್ ನಲ್ಲೂ ಸಾಲಮೇಳ ಶೀಘ್ರದ್ಲಿ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು.
ವ್ಯಕ್ತಿಗತ ಆಸ್ತಿ ನಿರ್ಮಾಣ ಫಲಾನುಭವಿಗಳ ಅರ್ಜಿಗಳನನು ವಾರ್ಡ್ ಮಟ್ಟದಲ್ಲಿ ಸ್ವೀಕರಿಸಲಾಗುವುದು. ಈ ಸಂಬಂಧ ಸಭೆಗಳನ್ನೂ ನಡೆಸಲಾಗುವುದು. ಇವರ ನಿರ್ಮಾಣ ಚಟುವಟಿಕೆಗಳಿಗೆ ಸಂಬಂಧಿಸಿದ ಎಸ್ಟಿಮೇಟ್ ಮೊಬಲಗು ಗಣನೆ ಮಾಡಿದ ನಂತರ ಸ್ವಂತ ವೆಚ್ಚ ಭರಿಸಬಲ್ಲ ಮತ್ತು ಭರಿಸಲಾರದೇ ಇರುವವರನ್ನು ವಿಂಗಡಿಸಲಾಗುವುದು. ನಂತರಸಹಕಾರಿ ಬ್ಯಾಂಕ್ ಗಳ ಜೆ.ಎಲ್.ಜಿ. ಸಾಲ ಲಭಿಸುವ ನಿಟ್ಟಿನಲ್ಲಿ ಒಂದೇ ಪ್ರದೇಶದ/ ವಾರ್ಡಿನ ಫಲಾನುಭವಿಗಳನ್ನು ಒಟ್ಟು ಸೇರಿಸಿ ಒಂದು ಜಿ.ಎಲ್.ಜಿ. ರಚಿಸಲಾಗುವುದು. ಈ ಜಿ.ಎಲ್.ಜಿ.ಗಳಿಗೆ ಒಂದು ಹೆಸರು, ಒಬ್ಬರು ಅಧ್ಯಕ್ಷ, ಕಾರ್ಯದರ್ಶಿ ಇರುವರು. ನಂತರ ಅವರ ನಿರ್ಮಾಣ ಚಟುವಟಿಕೆಗಳಿಗಿರುವ ಮೊಬಲಗು ಜೆ.ಎಲ್.ಜಿ. ಸಾಲ ರೂಪದಲ್ಲಿ ಲಭಿಸಲಿದೆ. ಸರಕಾರದಿಂದ ಈ ಮೊಬಲಗು ಮಂಜೂರಾದ ತಕ್ಷಣ ಸಾಲ ಮರುಪಾತಿಸಬೇಕು. ವರ್ಷಕ್ಕೆ ಶೇ 10 ಬಡ್ಡಿ ರೂಪದಲ್ಲಿ ಒಂದು ವರ್ಷದ ಅವಧಿಗೆ ಸಾಲ ನೀಡಲಾಗುವುದು.



