ಕಾಸರಗೋಡು: ಮಹಿಳಾ ಪ್ರಬಲೀಕರಣ ಚಟುವಟಿಕೆಗಳಲ್ಲಿ ನೂತನ ಹೆಜ್ಜೆಗಾರಿಕೆ ನಡೆಸುವ ಮೂಲಕ ಕಾಞಂಗಾಡ್ ಬ್ಲೋಕ್ ಪಂಚಾಯತ್ ಗಮನಸೆಳೆಯುತ್ತಿದೆ.
ಕುಟುಂಬಶ್ರೀ ಘಟಕಗಳ ಮೂಲಕ ಅಡುಗೆ ಮನೆಗೆ ಸೀಮಿತರಾಗಿದ್ದ ಮಹಿಳೆಯರನ್ನು ಸಮಾಜದ ಪ್ರದಾನವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಕಾಞಂಗಾಡ್ ಬ್ಲಾಕ್ ನಡೆಸುತ್ತಿರುವ ಕ್ರಮಗಳು ಅನನ್ಯವಾಗಿವೆ.
ಎದೆ ಹಾಲುಣಿಸುವ ಕೇಂದ್ರಗಳು:
ಪೆರಿಯ ಸಿ.ಎಚ್.ಸಿ.ಯಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲುಣಿಸುವ ಕೇಂದ್ರ ಆರಂಭಿಸಲಾಗಿದೆ. ಆಸ್ಪತ್ರೆಗೆ ಆಗಮಿಸುವ ತಾಯಂದಿರಿಗೆ ಇದು ಸಹಕಾರಿಯಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಗುವಿಗೆ ಹಾಲುಣಿಸಲಾರದೇ ಹೋಗುವ ಪ್ರಸಂಗಗಳಿಗೆಪರಿಹಾರ ಒದಗಿಸುವ ಯೋಜನೆಯ ಅಂಗವಾಗಿ ಬ್ಲಾಕ್ ಪಂಚಾಯತ್ ಈ ಕೇಂದ್ರ ತೆರೆದಿದೆ.
ಅಗ್ರಿ ಫ್ರೆಶ್:
ಹಣ್ಣು, ತರಕಾರಿ ಮಾರಾಟ ಕೇಂದ್ರದ ಜೊತೆಗೆ ಕ್ಯಾಂಟೀನ್ ಇರುವ ಯೋಜನೆಯಾಗಿ ಪೆರಿಯ ಸಿ.ಎಚ್.ಸಿ. ಆವರಣದಲ್ಲಿ ಬ್ಲಾಕ್ ಪಂಚಾಯತ್ ವತಿಯಿಂದ ಅಗ್ರಿ ಫ್ರೆಶ್ ಚಟುವಟಿಕೆ ನಡೆಸುತ್ತಿದೆ. ಕೃಷಿ ಇಲಾಖೆಯ ಆತ್ಮ ಯೋಜನೆಯ ಎಫ್.ಇ.ಒ. ಘಟಕ ರೂಪದಲ್ಲಿ ಅಗ್ರಿ ಫ್ರೆಶ್ ಜಾರಿಗೆ ಬಂದಿದೆ. ಉದುಮಾ ಗ್ರಾಮಪಂಚಾಯತ್ ನ ಕುಟುಂಬಶ್ರೀ ಕಾರ್ಯಕರ್ತೆಯರಾಗಿರುವ ಹತ್ತು ಮಂದಿ ಮಹಿಳೆಯರು ಇಲ್ಲಿ ದುಡಿಯುತ್ತಿದ್ದಾರೆ. ಇಲ್ಲಿನ ಉತ್ಪನ್ನಗಳ ಜೊತೆ ಮಸಾಲೆ ಪುಡಿ, ಕರ್ರಿ ಪೌಡರ್ ಇತ್ಯಾದಿಗಳೂ ಬೇಡಿಕೆ ಹೊಂದಿವೆ.
ಕೃಷಿ ಸಹಾಯ ಕೇಂದ್ರ:
ಕೃಷಿ ಸಹಾಯಕ ಯಂತ್ರಗಳ ಸಹಿತ 20ರಷ್ಟು ಮಹಿಳೆಯರೇ ಅಧಿಕರಾಗಿರುವ ಕಾರ್ಮಿಕರನ್ನು ಹೊಂದಿರುವ ಆತ್ಮ ಯೋಜನೆಯ ಅಂಗವಾಗಿರುವ ಕೃಷಿ ಸಹಾಯ ಕೇಂದ್ರ ಪೆರಿಯ ಸಿ.ಎಚ್.ಸಿ. ಆವರಣದಲ್ಲಿ ಚಟುವಟಿಕೆ ನಡೆಸುತ್ತಿದೆ. ಕೃಷಿಕರಿಗೆ ಬೇಕಾದ ತರಬೇತಿಗಳನ್ನೂ ಇಲ್ಲಿ ನೀಡಲಾಗುತ್ತದೆ. ಜೈವಿಕ ರೀತಿ ಅಕ್ಕಿ ಬೆಳೆಯುವ ಮೂಲಕ ಯಶೋಗಾಥೆ ಸೃಷ್ಟಿಸಿದ ಮತ್ತು ಯಶಸ್ವಿ ನರ್ಸರಿ ಹೊಂದಿರುವ ಹೆಗ್ಗಳಿಕೆಯೂ ಈ ಕೇಂದ್ರಕ್ಕೆ ಸಲ್ಲುತ್ತದೆ.
ಕುಮಾರಿ ಕ್ಲಬ್:
ಯುವತಿಯರಿಗೆ ಲೋಕ ಸೇವಾ ಆಯೋಗದ ಪರೀಕ್ಷೆಗಳಿಗೆ ಬೇಕಾದ ಸಹಾಯ ಒದಗಿಸುವ ನಿಟ್ಟಿನಲ್ಲಿ ಸುಮಾರು 30 ಅಂಗನವಾಡಿಗಳಲ್ಲಿ ಚಟುವಟಿಕೆ ನಡೆಸುವ ಕುಮಾರಿ ಕ್ಲಬ್ ಗಳನ್ನು ಸ್ಥಾಪಿಸಲಾಗಿದೆ. ಬ್ಲೋಕ್ ಪಂಚಾಯತ್ ವತಿಯಿಂದ ಪರೀಕ್ಷಾ ಸಿದ್ಧತೆಗೆ ಪೂರಕವಾಗಿರುವ ಪುಸ್ತಕಗಳು ವಿತರಿಸಲಾಗಿದ್ದು ಯುವತಿಯರು ಬಳಸಬಹುದಾಗಿದೆ. ಇದಕ್ಕಾಗಿ ಕಪಾಟುಗಳನ್ನೂ ವಿತರಿಸಲಾಗಿದೆ. ಯುವತಿಯರಿಗೆ ಪೆÇೀಷಕಾಹಾರ ವಿತರಣೆಯೂ ಇಲ್ಲಿ ನಡೆಯುತ್ತಿದೆ.
ಸಂತೆಗಾಗಿ ಕಟ್ಟಡ:
ಬ್ಲಾಕ್ ಪಂಚಾಯತ್ ನ 2018-20 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಪೆರಿಯ ಸಿ.ಎಚ್.ಸಿ. ಆವರಣದಲ್ಲಿ ಗ್ರಾಮೀಣ ಉತ್ಪನ್ನ ಸಂತೆಗಾಗಿ ನೂತನಕಟ್ಟಡ ನಿರಿಸಲಾಗುತ್ತಿದೆ. ಅತ್ಯಾಧುನಿಕ ರೀತಿಯ ನಿರ್ಮಾಣ ಇಲ್ಲಿ ಜರುಗುತ್ತಿದ್ದು, ವಿವಿಧ ಮಹಿಳಾ ಒಕ್ಕೂಟಗಳೂ ತಮ್ಮ ಉತ್ಪನ್ನಗಳನ್ನು ಇಲ್ಲಿ ಮರಾಟ ನಡೆಸಬಹುದಾದ ಸೌಲಭ್ಯ ಒದಗಿಸಲಾಗುವುದು.
ನ್ಯಾಪ್ಕಿನ್ ವೆಲ್ಡಂಗ್ ಘಟಕಗಳು:
ಬ್ಲಾಕ್ ಪಂಚಾಯತ್ವ್ಯಾಪ್ತಿಯ 7 ಶಾಲೆಗಳಲ್ಲಿ ಬಹುವರ್ಷ ಯೋಜನೆಯಲ್ಲಿ ಅಳವಡಿಸಿ 33 ಲಕ್ಷ ರೂ. ವೆಚ್ಚದಲ್ಲಿ ನ್ಯಾಪ್ಕಿನ್ ವೆಲ್ಡಿಂಗ್ ಘಟಕ ಸ್ಥಾಪಿಸಲಾಗಿದೆ. ಉದುಮಾ ನಾಲಾಂವಾದುಕ್ಕಲ್, ರಾವಣೀಶ್ವರಂ, ಪಾಕಂ, ಮಡಿಕೈ,ಅಂಬಲತ್ತರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ, ತಚ್ಚಂಗಾಡ್, ಪುಲ್ಲೂರು ಸರಕಾರಿ ಪ್ರೌಢಶಾಲೆಗಳಲ್ಲಿ ಈ ಘಟಕ ನಿರ್ಮಾಣಗೊಂಡಿದೆ.
ಅನೇಕ ಯೋಜನೆಗಳು ಜಾರಿ:
ಮಹಿಳೆಯರನ್ನು ಪ್ರಧಾನ ವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಇನ್ನೂ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಆರೋಗ್ಯ ಪೂರ್ಣ ಖಾದ್ಯ ತಯಾರಿಸುವ ಕುಟುಂಬಶ್ರೀ ಘಟಕಗಳಿಗೆ ಸಬ್ಸಿಡಿ ಒದಗಿಸಲಾಗಿದೆ.
ಎಂ, ಗೌರಿ. ಬ್ಲಾಕ್ ಪಂಚಾಯತ್ ಅಧ್ಯಕ್ಷೆ. ಕಾಂಞÂಂಗಾಡ್



