ಕಾಸರಗೋಡು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾಸರಗೋಡಿನಲ್ಲಿ ರೂಪಿಸಿದ ಜಿಲ್ಲಾ ಉಪ ಸಮಿತಿಯ ನೇತೃತ್ವದಲ್ಲಿ ಕೋಟಿ ಜಪ ಯಜ್ಞದ ಸಂಕಲ್ಪವು ಪರಕ್ಕಿಲ ಶ್ರೀ ಮಹಾದೇವ ದೇವಸ್ಥಾನದಲ್ಲಿ ಕೊಂಡೆವೂರು ಯೋಗಾನಂದ ಆಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪುರೋಹಿತರಾದ ಹರಿನಾರಾಯಣ ಮಯ್ಯ ಅವರ ಧಾರ್ಮಿಕತ್ವದಲ್ಲಿ ಕೋಟಿ ಜಪ ಯಜ್ಞ ಸಂಕಲ್ಪ ನಡೆಯಿತು.
ಬ್ರಹ್ಮಕಲಶೋತ್ಸವ ಜಿಲ್ಲಾ ಉಪ ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು ಅವರು ಬ್ರಹ್ಮಕಲಶೋತ್ಸವದ ಕೋಟಿ ಜಪ ಯಜ್ಞದಲ್ಲಿ ಕಾಸರಗೋಡಿನ ಮಹಿಳೆಯರ ಪಾತ್ರದ ಬಗ್ಗೆ ವಿವರಿಸಿದರು. ಕಾಸರಗೋಡು ನಗರ ಉಪಸಮಿತಿಯ ಅಧ್ಯಕ್ಷರಾದ ರಾಂ ಪ್ರಸಾದ್ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಮಧೂರು ಗ್ರಾಮ ಪಂಚಾಯತ್‍ನ ಮಾಜಿ ಸದಸ್ಯ ಹಾಗು ಧಾರ್ಮಿಕ ಮುಂದಾಳು ಪ್ರಭಾಶಂಕರ ಮಾಸ್ಟರ್ ಉಪಸ್ಥಿತರಿದ್ದರು.
ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಕಾರ್ಯಕ್ರಮ ನಿರೂಪಿಸಿದರು. ಮಧೂರು ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟರಮಣ ಅಡಿಗ ವಂದಿಸಿದರು.




