ಕುಂಬಳೆ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ ಕುಂಬಳೆ ಸಮೀಪದ ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ನಡೆಯಿತು.
ಯಕ್ಷಗಾನ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ತಂಡವನ್ನು ತರಬೇತುಗೊಳಿಸಿದ್ದರು. ಶಾಲಾ ಪ್ರಬಂಧಕ ಶೇಂತಾರು ನಾರಾಯಣ ಭಟ್ ಹಾಗೂ ವೆಂಕಟೇಶ್ವರ ಭಟ್ ಕುಂಟಿಕಾನಮಠ ಅವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕುಂಟಿಕಾನಮಠ, ಚೆಂಡೆಯಲ್ಲಿ ರಿತೇಶ್ ಮತ್ತು ವಂದನಾ, ಮದ್ದಳೆಯಲ್ಲಿ ಶಿವಶಂಕರ ಭಟ್ ಮತ್ತು ಕೃಷ್ಣ ಚಕ್ರತಾಳದಲ್ಲಿ ಶ್ರೀಶ ಪಂಜಿತ್ತಡ್ಕ ಸಹಕರಿಸಿದರು. ಕರ್ಣನಾಗಿ ನಂದಕಿಶೋರ್, ಅರ್ಜುನನಾಗಿ ಕಿಶನ್ ಮತ್ತು ಶ್ರೀಜಾ, ಶ್ರೀಕೃಷ್ಣ ಮತ್ತು ವೃದ್ಧ ಬ್ರಾಹ್ಮಣನಾಗಿ ಅಭಿಜ್ಞಾ, ಶಲ್ಯನಾಗಿ ಉಪಾಸನಾ ಹಾಗೂ ಸರ್ಪಾಸ್ತ್ರವಾಗಿ ಶ್ರೀಪೂಜಾ ಪಾತ್ರನಿರ್ವಹಣೆಗೈದರು.





