ಉಪ್ಪಳ: ಬಾಯಾರು ಬಂಡಿಮಾರು ನೇಮ ಜ. 8 ರಂದು ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಇಂದು(ಜ. 7) ಮಧ್ಯಾಹ್ನ ಬಲಿವಾಡು ಕೂಟ ನಡೆಯಲಿದೆ. ರಾತ್ರಿ 9 ರಿಂದ ಮಂಡಲ ಪೂಜೆ, 10 ರಿಂದ ರಂಗಪೂಜೆ ಹಾಗೂ ಪ್ರಸಾದ ಭೋಜನ ನಡೆಯಲಿದೆ. ಬಳಿಕ ಭಂಡಾರ ಇಳಿಯುವ ಕಾರ್ಯಕ್ರಮದ ನಡೆಯಲಿದೆ.
ಬುಧವಾರ ಅಪರಾಹ್ನ 3 ಕ್ಕೆ ಶ್ರೀ ಮಲರಾಯಾದಿ ದೈವಗಳ ನೇಮ ವಿಜೃಂಭಣೆಯಿಂದ ಜರಗಲಿರುವುದು. ಭಕ್ತಾದಿಗಳಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀದೇವರ ಹಾಗೂ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.





