ಸಮರಸ ಚಿತ್ರ ಸುದ್ದಿ: ಉಪ್ಪಳ: ತ್ರಿಶೂರಿನ ಸರಸ್ವತೀ ವಿದ್ಯಾನಿಕೇತನ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಭಾರತೀಯ ವಿದ್ಯಾನಿಕೇತನದ ಕೇರಳ ರಾಜ್ಯಮಟ್ಟದ ಕಲೋತ್ಸವದಲ್ಲಿ ಬಾಲವಿಭಾಗದ ಸಂಸ್ಕೃತ ಭಾಷಣಸ್ಪರ್ಧೆಯಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದವಿದ್ಯಾಪೀಠದ 8ನೇ ತರಗತಿಯ ವಿದ್ಯಾರ್ಥಿನಿ ಕು. ಪ್ರೀತಿ "ಎ" ಗ್ರೇಡ್ ನೊಂದಿಗೆ ತೃತೀಯಸ್ಥಾನ ಗಳಿಸಿರುತ್ತಾಳೆ. ಈಕೆ ಕೊಂಡೆವೂರಿನ ಶೀ ಚಂದ್ರಪಾಲ್ ಹಾಗೂ ಶಾಂಭವಿ ದಂಪತಿಗಳ ಪುತ್ರಿಯಾಗಿದ್ದಾಳೆ.
ಕಿಶೋರವಿಭಾಗದ ಭರತನಾಟ್ಯ ಹಾಗೂ ಜಾನಪದನೃತ್ಯಸ್ಪರ್ಧೆಗಳಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದವಿದ್ಯಾಪೀಠದ ವಿದ್ಯಾರ್ಥಿ ಪ್ರದ್ಯೋತ್ ಎನ್. "ಎ" ಗ್ರೇಡ್ ನೊಂದಿಗೆ ಪ್ರಥಮಸ್ಥಾನ ಗಳಿಸಿರುತ್ತಾನೆ. ಈತ ಕಲಾತಪಸ್ವಿ, ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯನಾಗಿದ್ದು, ಉಪ್ಪಳದ ಡಾ.ಎನ್. ಪ್ರದೀಪ್ ಕುಮಾರ್ ಹಾಗೂ ಶಿಕ್ಷಕಿ ರೇಖಾ ದಂಪತಿಗಳ ಪುತ್ರನಾಗಿದ್ದಾನೆ.






