ಪೆರ್ಲ:ಸ್ವರ್ಗ ಸ್ವಾಮೀ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಜಯಂತಿ, ಶಾಲಾ ವಾರ್ಷಿಕೋತ್ಸವ ಮತ್ತು ಹೆತ್ತವರ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು.
ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್. ದೀಪ ಪ್ರಜ್ವಲಿಸುವ ಮೂಲಕ ಭಾನುವಾರ ಸಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಪೂಕರೆ, ಮಾತೃಸಂಘದ ಅಧ್ಯಕ್ಷೆ ಪ್ರಿಯಾ ಚಾಕಟೆಕುಮೇರಿ, ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಉಪಸ್ಥಿತರಿದ್ದರು.
ಸ್ವರ್ಗ, ಕೆಂಗಣಾಜೆ, ಅಡ್ಕಸ್ಥಳ, ಶಿವಗಿರಿ, ಪೆರ್ಲ ವಿವೇಕಾನಂದ ಶಿಶು ಮಂದಿರ(ನಾಲಂದ), ಸರ್ಪಮಲೆ ಹಾಗೂ ಬಾಲ ಭಾರತಿ ಅಂಗನವಾಡಿ ಪುಟಾಣಿಗಳ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.




