ಮಂಜೇಶ್ವರ: ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿಯಾಗಿ, ವಿಶಿಷ್ಟ ವ್ಯಕ್ತಿಯಾಗಿ ದೀನ ದಲಿತರ, ಅಸಹಾಯಕರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೋಮಲ ಹೃದಯದ, ನಾಡು ನುಡಿಗಳ ಶಕ್ತಿಯಾಗಿ ಬೆಳೆದು ಹಿಂದೂ ಧರ್ಮೀಯರಲ್ಲದೆ, ಅನ್ಯ ಧರ್ಮೀಯರಿಂದಲೂ ಪೂಜ್ಯ ಗೌರವವನ್ನು ಪಡೆದು ವಿಶ್ವದಾದ್ಯಂತ ನಡೆದಾಡುವ ದೇವರೆಂದು ಕೋಟಿ ಕೋಟಿ ಜನರ ಹೃದಯ ಮಂದಿರದಲ್ಲಿ ನೆಲೆಯಾಗಿರುವ ಶ್ರೇಷ್ಠ ಸಂತ ಪೇಜಾವರ ಶ್ರೀಗಳಿಗೆ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಕೃಪಾ ಜೈ ವೀರಮಾರುತಿ ವ್ಯಾಯಾಮ ಶಾಲೆ ಹಾಗು ಬಾಲಗೋಕುಲದ ಪುಟಾಣಿಗಳಿಂದ ನುಡಿನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಉದ್ಯಾವರ ಶ್ರೀ ದೈವಗಳ ಅಣ್ಣದೈವದ ಪಾತ್ರಿ ರಾಜ ಬೆಳ್ಚಾಡ ಮತ್ತು ಗುರು ಸ್ವಾಮಿ ಸಂಜೀವ ಶೆಟ್ಟಿ ಮಾಡ, ಹರೀಶ್ ಮಾಡ, ಗೋಪಾಲ ಆಚಾರ್ಯ ಮುಂತಾದ ಹಲವು ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.




